ಕರಾವಳಿ

ವಿಧಾನ ಮಂಡಲ ಕಲಾಪಗಳಿಗೆ ಟಿವಿ ಮಾಧ್ಯಮಕ್ಕೆ ನಿಷೇಧ : ನಿರ್ಬಂಧ ಹಿಂಪಡೆಯಲು ಒತ್ತಾಯ

Pinterest LinkedIn Tumblr

ಮಂಗಳೂರು.ಅಕ್ಟೋಬರ್ 15: ವಿಧಾನ ಮಂಡಲ ಕಲಾಪಗಳಿಗೆ ವಿದ್ಯುದ್ಮ್ಯಾನ ಟಿವಿ ಮಾಧ್ಯಮದವರು ನಿಷೇದಿಸಿರುವುದನ್ನು ಹಿಂದಕ್ಕೆ , ಪಡೆಯುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರಿಗೆ ಮನವಿ ಸಲ್ಲಿಸಲಾಯಿತು .

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಮಹತ್ವದ ಸ್ಥಾನವನ್ನು ಹೊಂದಿದೆ .ಜನ ಸಾಮಾನ್ಯರ ಆಶೋತ್ತರ ಗಳನ್ನು ನಾಡಿನ ಸರ್ವಾ0ಗಿಣ ಅಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ವಿಧಾನ ಮಂಡಲ ಕಲಾಪಗಳನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಸರಿಯಾದ ಕ್ರಮ.ಇದರಿಂದ ಕಲಾಪಗಳನ್ನು ಇನ್ನಷ್ಟ್ಟು ಪಾರದರ್ಶಕ ವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಸಲು ಸಾಧ್ಯವಾಗುತ್ತದೆ .

ಅಗತ್ಯ ಬಿದ್ದರೆ ಅದಕ್ಕೊಂದು ಮಾಧ್ಯಮ ಸಂಹಿತೆ ರೂಪಿಸಬಹುದು .ಆದರೆ ಯಾವುದೇ ಚರ್ಚೆ ಅಭಿಪ್ರಾಯ ಪಡೆಯದೆ ಏಕಾಏಕಿ ನಿರ್ಬಂಧಿಸಿರುವುದು ಸರಿಯಲ್ಲ .ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನೀಡಿದ ನಿರ್ಬಂಧ ಆದೇಶ ವನ್ನು ಹಿಂಪಡೆದು ಕೊಳ್ಳಬೇಕೆಂದು ಸಂಘವು ವಿನಂತಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ವಿಧಾನ ಸಭೆಯ ಸಭಾಧ್ಯಕ್ಷರಿಗೆ ನೀಡಿದ ಮನವಿ ಯಲ್ಲಿ ತಿಳಿಸಲಾಗಿದೆ.

Comments are closed.