ಕರಾವಳಿ

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ದಯಾನಂದ ನಾಯಕ್‌ ದತ್ತಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : ಹಿರಿಯ ಸಾಮಾಜಿಕಧುರೀಣ, ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ‌ಉತ್ಸವದ ಸ್ಥಾಪಕ ದಿವಂಗತ ಉಳ್ಳಾಲ ದಯಾನಂದ ನಾಯಕ್‌ ಅವರ ಹೆಸರಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಪ್ರದಾನ ಮಾಡಲಾಯಿತು.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಅನನ್ಯ ಸಾಧನೆಗೈಯ್ಯುವ ಸಂಸ್ಥೆಗಳಿಗೆ ಈ ದತ್ತಿನಿಧಿಯನ್ನು ವರ್ಷಂಪ್ರತಿ ನೀಡಲಾಗುತ್ತಿದೆ. ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ‌ಇತ್ತೀಚೆಗೆ ಜರಗಿದ 72ನೇ ವರ್ಷದ ಶಾರದೋತ್ಸವದ ಸಂದರ್ಭಜರಗಿದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಮ ವಿದ್ಯಾಕೇಂದ್ರದ ಪರವಾಗಿ ಸಂಸ್ಥೆಯ ಪ್ರತಿನಿಧಿ ಮನೋಜ್ ಸಾಲ್ಯಾನ್‌ದತ್ತಿ ಪ್ರಶಸ್ತಿ ಸ್ವೀಕರಿಸಿದರು.

ಸೂರಜ್‌ಇಂಟರ್‌ನ್ಯಾಷನಲ್ ಸ್ಕೂಲ್, ಮುಡಿಪು‌ಇಲ್ಲಿನಚೇರ್‌ಮೆನ್‌ಡಾ. ಮಂಜುನಾಥ‌ಎಸ್. ರೇವಣ್‌ಕರ್‌ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ದೇವಾಂಗ ಗಾರ್ಮೆಂಟ್ಸ್‌ನ‌ ಎನ್. ಬಿ. ಶರವಣನ್, ಧರ್ಮಸ್ಥಳದ ಮೆಸ್ಕಾಂನ ಅಸಿಸ್ಟೆಂಟ್ ಇಂಜಿನಿಯರ್ ವಿಕ್ರಂಟಿ.ಡಿ. ಡ್ಯೂಲಕ್ಸ್ ಪೈಂಟ್ಸ್ ಬ್ರಾಂಚ್ ಮೆನೇಜರ್‌ ಯಶವಂತ್ ನಾಕ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪತಂಜಲಿ ಯೋಗಶಿಕ್ಷಣ ಸಮಿತಿಯಕರ್ನಾಟಕ ಪ್ರಾಂತ ಸಂಚಾಲಕ ರವೀಶ್‌ಕುಮಾರ್‌ಧಾರ್ಮಿಕ‌ ಉಪನ್ಯಾಸವಿತ್ತರು. ಒಳಿತು ಕೆಡುಕು‌ ಎರಡೂ ವಿಚಾರಗಳು ನಮ್ಮ ನಮ್ಮ ಮನಸ್ಸಲೇ‌ಆಡಗಿದೆ. ಆದುದರಿಂದ ಒಳ್ಳೆಯ ಚಿಂತನೆಯತ್ತ ನಮ್ಮೆಲ್ಲರಚಿತ್ತವನ್ನು ಹರಿಸಬೇಕು. ಇತಂಹ ಧಾರ್ಮಿಕ ಆಚರಣೆಗಳು ನಮ್ಮ ಮನಸ್ಸಿಗೆ ಮುದ ನೀಡುವುದಲ್ಲದೆ ಸತ್‌ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ‌ಎಂದರು.

ಉತ್ಸವ ಸಮಿತಿಯ‌ಅಧ್ಯಕ್ಷ ಶ್ರೀಕರ ಕಿಣಿ ಪ್ರಸ್ತಾವನೆಗೈದರು. ಸಂಚಾಲಕ ಎಂ. ವಾಸುದೇವರಾವ್‌ ದತ್ತಿನಿಧಿಯ‌ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾರ್ಯದರ್ಶಿ ಭರತ್‌ಕುಮಾರ್ ಸ್ವಾಗತಿಸಿದರು.

ಕಾರ್ಯಧ್ಯಕ್ಷ ವಿಜಯ ಉಳ್ಳಾಲ್, ಜತೆ ಕಾರ್ಯದರ್ಶಿ ರೋಹಿದಾಸ್ ಬಂಗೇರ, ಶ್ರೀ ಶಾರದಾ ಮಹಿಳಾ ವೇದಿಕೆಯ‌ ಅಧ್ಯಕ್ಷೆ ರೇಣುಕಾ ಕಾಂಚನ್, ಕಾರ್ಯದರ್ಶಿ ಪ್ರಭಾವತಿ ಪಿ. ಬಂಗೇರ, ಶ್ರೀಮತಿ ಗೀತಾ ವಿಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯ್ತು.

ಬಳಿಕ ಶ್ರೀ ವಿದ್ಯಾರಣ್ಯಕಲಾವೃಂದ ಉಳ್ಳಾಲ ಇವರ ಸಂಯೋಜನೆಯಲ್ಲಿ ಸುನೀತಾಜಯಂತ್ ಉಳ್ಳಾಲ್, ನಾಟ್ಯ ನಿಲಯ‌ಇವರಿಂದ ‘ಭರತನಾಟ್ಯ’ ಪ್ರದರ್ಶನಗೊಂಡಿತು. ಶಶಿಕಾಂತಿ ಬಿ. ಬಂಗೇರ ವಂದನಾರ್ಪಣೆಗೈದರು. ಪಶುಪತಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Comments are closed.