ಕರಾವಳಿ

ಪ್ರಜ್ಞಾ ಸ್ವಾದಾರ ಕೇಂದ್ರದಿಂದ ಮೂವರು ಮಹಿಳೆಯರು ನಾಪತ್ತೆ

Pinterest LinkedIn Tumblr

ಮಂಗಳೂರು: ಪ್ರಜ್ಞಾ ಸ್ವಾದಾರ ಕೇಂದ್ರ ಜಪ್ಪಿನಮೊಗರು ಸಂಸ್ಥೆಯ ಮೂವರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜ್ಞಾ ಸ್ವಾದಾರ ಕೇಂದ್ರ ಜಪ್ಪಿನಮೊಗರು ಈ ಸಂಸ್ಥೆಯಲ್ಲಿ ದಾಖಲಾಗಿದ್ದ ಕುಮಾರಿ (30), ಅಮಲ(30), ಸಂದ್ಯಾ (28) ಎಂಬ ಮೂರು ಮಹಿಳೆಯರು ಅಕ್ಟೋಬರ್ 8 ರಂದು ರಾತ್ರಿ 11 ಗಂಟೆಯ ನಂತರ ಸ್ವಾದಾರ ಕೇಂದ್ರದಿಂದ ಕಾಣೆಯಾಗಿರುತ್ತಾರೆ.

ಕಾಣೆಯಾದವರ ಚಹರೆ ಇಂತಿವೆ :

ಹೆಸರು- ಕುಮಾರಿ ಪ್ರಾಯ- 30 ವರ್ಷ, ಎತ್ತರ- 5.6 ಅಡಿ, ಕಪ್ಪು ಮೈ ಬಣ್ಣ ವರುಟು ಮುಖ ದಪ್ಪಗಿನ ಶರೀರ, ಧರಿಸಿದ್ದ ಬಟ್ಟೆ- ಕಪ್ಪು ಮತ್ತು ಬಿಳಿ ಮಿಶ್ರಿತ ಚೂಡಿದಾರ ಮತ್ತು ಕೇಸರಿ ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ-ಕನ್ನಡ.

ಹೆಸರು- ಅಮಲ ಪ್ರಾಯ- 30 ವರ್ಷ, ಗಂಡ- ಬಾಲಾಜಿ ಆಂಜನೇಯ, ವಿಳಾಸ- ಸ್ವಾಮಿ ದೇವಸ್ಥಾನದ ಹತ್ತಿರ ಹೊಸೂರು ಕಾಲನಿ ತಮಿಳುನಾಡು, ಎತ್ತರ- 5.5 ಅಡಿ, ಕಪ್ಪು ಮೈ ಬಣ್ಣ, ಧರಿಸಿದ್ದ ಬಟ್ಟೆ- ಪಿಂಕ್ ಬಣ್ಣದ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ- ತಮಿಳು, ಕನ್ನಡ.

ಹೆಸರು- ಸಂಧ್ಯಾ ಪ್ರಾಯ- 28 ವರ್ಷ, ವಿಳಾಸ- ಕಜೆಕೊಳಂಬೆ ಪೆರಾರೆ ಹೊಯ್ಗೆ ಪದವು ಮಂಗಳೂರು ಎತ್ತರ- 4.5 ಅಡಿ, ಗೋಧಿ ಮೈ ಬಣ್ಣ, ಧರಿಸಿದ್ದ ಬಟ್ಟೆ- ಕಪ್ಪು ಬಣ್ಣದ ಚೂಡಿದಾರ್, ಮಾತನಾಡುವ ಭಾಷೆ- ಹಿಂದಿ, ಕನ್ನಡ,ತುಳು.

ಕಾಣೆಯಾಗಿರುವ 3 ಮಹಿಳೆಯರ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ದೂರವಾಣಿ ಸಂಖ್ಯೆ : 0824-2220529/ 2220800, 9480805354 ಸಂಪರ್ಕಿಸಲು ಕಂಕನಾಡಿ ನಗರ ಠಾಣೆ ಪ್ರಕಟಣೆ ತಿಳಿಸಿದೆ.

Comments are closed.