ಕರಾವಳಿ

ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನಿಸ್ಟ್ ಕದ್ರಿ ಗೋಪಾಲನಾಥ್ ನಿಧನಕ್ಕೆ ಕಸಪಾ ಅಧ್ಯಕ್ಷ ಕಲ್ಕೂರ ಸಂತಾಪ

Pinterest LinkedIn Tumblr

ಮಂಗಳೂರು : ಕೇಂದ್ರ ಸಂಗೀತ ನಾಟಕ‌ಅಕಾಡೆಮಿ ಪ್ರಶಸ್ತಿ ಸಹಿತ ನಾಡಿನ ಅನೇಕ ಹೆಮ್ಮೆಯ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿರುವ ಕಲೈಮಾಮಣಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ಯಾಕ್ಸೋಫೋನ್‌ಕಲಾವಿದಕದ್ರಿ ಗೋಪಾಲನಾಥರವರ ನಿಧನಕ್ಕೆ ದ.ಕ.  ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರಕಲ್ಕೂರತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ‌ಅನಾರ್ಘ್ಯರತ್ನ. ಸ್ಯಾಕ್ಸೋಫೋನ್ ವಾದನದಲ್ಲಿಜಗದ್ವಿಖ್ಯಾತರಾದ ಹೆಮ್ಮೆ ಈ ಕಲಾವಿದರಾಗಿದ್ದು‌ ಅವರು   ನಮ್ಮ ಜಿಲ್ಲೆಯವರು ನಮ್ಮ ಮಂಗಳೂರಿನ ಕದ್ರಿಯವರುಕರ್ನಾಟಕಕನ್ನಡ ನಾಡಿನ ಸಂಗೀತಕ್ಷೇತ್ರದ ಸಾಧಕ ಶ್ರೇಷ್ಠರು‌ ಎಂಬ ಹೆಮ್ಮೆ  ನಮ್ಮೆಲ್ಲರದ್ದಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಯಾವತ್ತೂ ಕಾರ್ಯಕ್ರಮಗಳಲ್ಲಿ ತನ್ನನ್ನುತಾನು ತೊಡಗಿಸಿಕೊಳ್ಳುವ ಮೂಲಕ ಅನೇಕ ಬಾರಿ ಸಾಹಿತ್ಯ ಮ್ಮೇಳನದ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿತಮ್ಮ ಸರಳತೆ ಹಾಗೂ ಎಲ್ಲರೊಂದಿಗೆಗೌರವ ಭಾವನೆಯಿಂದ ಸ್ಪಂದಿಸುತ್ತಿದ್ದಕದ್ರಿ ಗೋಪಾಲನಾಥರ ವ್ಯಕ್ತಿತ್ವ ನಿಜಕ್ಕೂ ಸ್ಮರಣೀಯ‌ಎಂಬುದಾಗಿಕಲ್ಕೂರತಮ್ಮ ಸಂತಾಪದಲ್ಲಿ ನುಡಿದಿದ್ದಾರೆ.

Comments are closed.