ಕರಾವಳಿ

ಅಕ್ಟೋಬರ್ 8ರಂದು ಮಂಗಳೂರಿನಲ್ಲಿ ಮೇರು ನಟ ಅನಂತ್‌ನಾಗ್‌ರಿಂದ English” ತುಳು ಚಿತ್ರದ ಹಾಡಿನ ಧ್ವನಿ ಸುರುಳಿ ಬಿಡುಗಡೆ

Pinterest LinkedIn Tumblr

ಮಂಗಳೂರು,ಆಕ್ಟೋಬರ್.06 : ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ಮೊದಲ ಬಾರಿಗೆ ತುಳುವಿನಲ್ಲಿ ನಿರ್ಮಿಸುತ್ತಿರುವ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲೀಷ್” ಸಿನಿಮಾದ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 8, ಮಂಗಳವಾರದಂದು ಸಂಜೆ 7:30ಕ್ಕೆ ಮಂಗಳೂರಿನಲ್ಲಿ ನಡೆಯಲಿದೆ.

ನಗರದ ಲಾಲ್‌ಭಾಗ್ ಬಸ್ ನಿಲ್ಧಾಣದ ಬಳಿ (ಪಬ್ಬಸ್ ಸಮೀಪ) ಮಂಗಳವಾರ ಸಂಜೆ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಆಯೋಜಿಸಿರುವ ಭವ್ಯ ದಸರಾ ಮಹೋತ್ಸವ – ಸಂಗೀತಾ ರಸಸಂಜೆ ಕಾರ್ಯಕ್ರಮದಲ್ಲಿ “English” ಚಿತ್ರದ ಮೂಲಕ ತುಳು ಚಿತ್ರವೊಂದರಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿರುವ ಹಿರಿಯ ನಟ ಅನಂತನಾಗ್ ಅವರು English” ತುಳು ಚಿತ್ರದ ಅಡಿಯೋ ಸಿಡಿ ಬಿಡುಗಡೆ ಮಾಡಲಿರುವರು.

ಈ ಒಂದು ಆಧ್ಹೂರಿ ಹಾಗೂ ಸುಮಧುರ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ,ನಿರ್ಮಾಪಕ ಹರೀಶ್ ಶೇರಿಗಾರ್, ನಿರ್ಮಾಪಕಿ ಶ್ರೀಮತಿ ಶರ್ಮಿಳಾ ಶೇರಿಗಾರ್, ಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಾಯಕಿ ನಟಿ ನವ್ಯಾ ಪೂಜಾರಿ,ಹಿರಿಯ ಕಲಾವಿದ ಭೋಜರಾಜ ವಾಮಂಜೂರು ಸೇರಿದಂತೆ ಚಿತ್ರ ತಂಡದ ಹಲವಾರು ಸದಸ್ಯರು ಪಾಲ್ಗೊಳ್ಳಲ್ಲಿದ್ದಾರೆ.

ಹರೀಶ್ ಶೇರಿಗಾರ್ ಅವರ ಪ್ರಥಮ ತುಳು ಚಿತ್ರ : ಅನಂತ್‌ನಾಗ್ ಅವರಿಗೂ ಪ್ರಥಮ ತುಳು ಚಿತ್ರ

ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಮೊದಲ ಬಾರಿಗೆ ತುಳು ಸಿನಿಮಾವನ್ನು ನಿರ್‍ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ಅನಂತನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾತ್ರವಲ್ಲದೇ ಮೇರು ನಟ ಅನಂತನಾಗ್ ಅವರು “English” ಚಿತ್ರದ ಮೂಲಕ ತುಳು ಚಿತ್ರವೊಂದರಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದಾರೆ.

ತಾರಾಗಣ:

ಸಿನಿಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಲಿದ್ದಾರೆ. ಸಂಕಲನ: ಮನು ಶೇಡ್‌ಗಾರ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್, ಡಿಸೈನ್ ದೇವಿ ರೈ, ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್‌ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಮೊದಲಾದವರು ಇದ್ದಾರೆ.

ಇಂಗ್ಲಿಷ್ ಸಿನಿಮಾದ ಕಥಾ ಸಾರಾಂಶ :

ಹೀರೋ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹೀರೋಯಿನ್ ತನ್ನ ಗೆಳತಿಯ ಜೊತೆ ಬರುತ್ತಿರುತ್ತಾಳೆ. ಹೀರೋಗೆ ಹೀರೋಯಿನ್ ಅನ್ನು ಕಂಡು ಇಷ್ಟವಾಗುತ್ತದೆ. ಒಂದು ದಿನ ಹೀರೋ ಹೀರೋಯಿನ್ ಬಳಿ ತನ್ನ ಪ್ರೀತಿ ವಿಷಯ ತಿಳಿಸುತ್ತಾನೆ. ಹೀರೋಹಿನ್ ಹೀರೋಗೆ ಇಂಗ್ಲಿಷ್ ಬರುವುದಿಲ್ಲವೆಂದು ತಾನು ಮದುವೆ ಆದರೆ ಇಂಗ್ಲಿಷ್ ಗೊತ್ತಿರುವವನನ್ನು ಮಾತ್ರ ಆಗುವುದೆಂದು ನಾಯಕನನ್ನು ನಿರಾಕರಿಸುತ್ತಾಳೆ. ಅಂದಿನಿಂದ ಹೀರೋ ತನ್ನ ಫ್ರೆಂಡ್ಸ್ ಜೊತೆ ಸೇರಿ ಇಂಗ್ಲಿಷ್ ಕಲಿಯಲು ಶುರು ಮಾಡುತ್ತಾನೆ.

ಹೀರೋ ಕಷ್ಟಪಟ್ಟು ಇಂಗ್ಲಿಷ್ ಕಲಿಯುವುದನ್ನು ನೋಡಿ ಹೀರೋಹಿನ್‌ಗೆ ಹೀರೋನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್ ಶುರುವಾಗುತ್ತದೆ. ನಂತರದಲ್ಲಿ ಫ್ರೆಂಡ್‌ಶಿಪ್ ಪ್ರೀತಿಯಲ್ಲಿ ಬದಲಾಗುತ್ತದೆ. ಹೀರೋಹಿನ್ ತನ್ನ ಪ್ರೀತಿಯನ್ನು ಮನೆಯವರಲ್ಲಿ ತಿಳಿಸುತ್ತಾರೆ. ಆದರೆ ಮನೆಯವರು ಹೀರೋನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹೀರೋ ತನ್ನಂತೆಯೇ ಇತರರಿಗೂ ಇಂಗ್ಲಿಷ್ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ಅನ್ನು ಪ್ರಾರಂಭಿಸುತ್ತಾನೆ. ಹೀರೋಹಿನ್ ಮನೆಯವರಿಗೆ ಹೀರೋನ ಮೇಲೆ ಹೆಮ್ಮೆಯಾಗು ತ್ತದೆ. ಇಬ್ಬರಿಗೂ ಮದುವೆ ಮಾಡಿಸುತ್ತಾರೆ.

Comments are closed.