ಕ್ರೀಡೆ

ರೋಹಿತ್ ಶರ್ಮಾರಿಂದ ಒಂದೇ ಟೆಸ್ಟ್ ನಲ್ಲಿ ಹಲವು ವಿಶ್ವದಾಖಲೆ!

Pinterest LinkedIn Tumblr


ನವದೆಹಲಿ: ರೋಹಿತ್ ಶರ್ಮಾ ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದರು.ಆರಂಭಿಕ ಆಟಗಾರನಾಗಿ ಪ್ರಾರಂಭಿಸಿದ ಮೊದಲ ಟೆಸ್ಟ್ ನಲ್ಲಿಯೇ ಅವರು 100 ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಗೆ ಪಾತ್ರರಾದರು.

ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ 176 ರನ್ ಗಳಿಸಿಸುವ ಮೂಲಕ ಮಾಯಂಕ್ ಅಗರ್ ವಾಲ್ ಜೊತೆ ಸೇರಿ ದಾಖಲೆ ಜೊತೆಯಾಟ ನಿರ್ಮಿಸಿದ್ದರು. ಇದಾದ ಬಳಿಕ ಎರಡನೇ ಇನಿಂಗ್ಸ್ ನಲ್ಲಿ ಅವರು 127 ರನ್ ಗಳಿಸಿದ್ದರು.

ನೂರಕ್ಕೂ ಅಧಿಕ ಸರಾಸರಿ: ರೋಹಿತ್ ಶರ್ಮಾ ಎರಡನೇ ಶತಕದೊಂದಿಗೆ ಸ್ವದೇಶದಲ್ಲಿ ಟೆಸ್ಟ್‌ಗಳಲ್ಲಿ ಸರಾಸರಿ 100 ಯನ್ನು ಹೊಂದಿದ ಸಾಧನೆ ಮಾಡಿದರು. ರೋಹಿತ್ ಅವರು ಬುಧವಾರ ನಾಲ್ಕನೇ ಟೆಸ್ಟ್ ಶತಕವನ್ನು ಹೊಡೆದಾಗ ಡಾನ್ ಬ್ರಾಡ್ಮನ್ ಅವರ ಸರಾಸರಿ 98.22 ರಷ್ಟನ್ನುಸಮಗೊಳಿಸಿದ್ದರು. ರೋಹಿತ್ ಶರ್ಮಾ ಈಗ ಭಾರತದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಶತಕ ಮತ್ತು ಆರು ಅರ್ಧಶತಕಗಳನ್ನು ಹೊಂದಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ ಹೆಚ್ಚಿನ ಸಿಕ್ಸರ್‌ಗಳು: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ 13 ಸಿಕ್ಸರ್ ಬಾರಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ ವಸೀಮ್ ಅಕ್ರಂ ಅವರ 12 ಸಿಕ್ಸರ್‌ಗಳ ದೀರ್ಘಕಾಲದ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಅಕ್ರಮ್ 1996 ರಲ್ಲಿ ಜಿಂಬಾಬ್ವೆ ವಿರುದ್ಧ 12 ಸಿಕ್ಸರ್ ಗಳನ್ನು ಬಾರಿಸಿದ್ದರು

ಓಪನರ್ ಆಗಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಓಪನರ್ ಆಗಿ ತಮ್ಮ ಮೊದಲ ಟೆಸ್ಟ್ ನಲ್ಲಿಯೇ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡರು.

ಎರಡೂ ಇನಿಂಗ್ಸ್ ಗಳಲ್ಲಿ ಸ್ಟಂಪ್ ಔಟ್ : ವಿಶೇಷವೆಂದರೆ ರೋಹಿತ್ ಶರ್ಮಾ ಎರಡು ಇನಿಂಗ್ಸ್ ಗಳಲ್ಲಿ ಅವರು ಸ್ಟಂಪ್ ಔಟ್ ಆಗುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Comments are closed.