ಕರಾವಳಿ

ಸ್ವಚ್ಛತೆಯ ಗ್ರಾಮ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ : ಮಾಜಿ ಸಚಿವ ಯು.ಟಿ.ಖಾದರ್ 

Pinterest LinkedIn Tumblr

ಮಂಗಳೂರು, ಅಕ್ಟೋಬರ್.03: ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೃಹತ್ ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ150ನೆಯ ಜನ್ಮದಿನಾಚರಣೆಯನ್ನು 2-10- 2019 ರಂದು
ಅತ್ಯಂತ ಔಚಿತ್ಯಪೂರ್ಣ ರೀತಿಯಲ್ಲಿ ಆಚರಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ,ಕೊಣಾಜೆ, ಮಾತಾ ಅಮೃತಾನಂದಮಯಿ ಮಠ, ಬೋಳೂರು, ಮಂಗಳೂರು, ಎಂ.ಆರ್. ಪಿ.ಎಲ್, ಕೊಣಾಜೆ ಗ್ರಾಮ ಪಂಚಾಯತ್,KSRP-ಕೊಣಾಜೆ,,7ನೇ ಬ್ಯಾಟಾಲಿಯನ್,ಕೊಣಾಜೆ ಪೊಲೀಸ್ ಠಾಣೆ, ಮತ್ತು ಕೊಣಾಜೆ ಗ್ರಾಮದ ಸ್ಥಳೀಯ ಸಂಘ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಚ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ ಅಮಲ ಭಾರತ ಅಭಿಯಾನ – ಸ್ವಚ್ಚತಾ ಜನಜಾಗರಣ ಮಹಾಯಜ್ಞ ಸುಮಾರು4000 ಸೇವಾರ್ಥಿ ಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

ಸೇವಾ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರದಲ್ಲಿ , ಸುತ್ತಲಿನ ಹಳ್ಳಿಗಳಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಪರ್ಕ ರಸ್ತೆಗಳಲ್ಲಿ ಏಕ ಕಾಲದಲ್ಲಿ ಹಲವು ತಂಡಗಳಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
# ಮನೆ ಮನೆಗಳಲ್ಲಿ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.
#ಏಕ ಬಳಕೆಯ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.
# ಸ್ವಚ್ಚ, ಸುಂದರ ಹಾಗೂ ಆರೋಗ್ಯ ಪೂರ್ಣ ಪರಿಸರದ ಆವಶ್ಯಕತೆ ಮತ್ತು ನಾಗರಿಕ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡುವ ಕರಪತ್ರಗಳ ಹಂಚಿಕೆ ಮಾಡಲಾಯಿತು.
# ಸ್ವಚ್ಚತಾ ಆಂದೋಲನದಡಿ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿ ಮಾಡಲಾಯಿತು.
#ಬೀದಿ ನಾಟಕಗಳ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರವರು ಜ್ಯೋತಿ ಬೆಳಗಿಸಿದರು.

ಸಮಾಜಮುಖಿ ಸೇವಾ ಕಾರ್ಯಕ್ರಮದನ್ವಯ ಗ್ರಾಮದ ಅಂಗನವಾಡಿ, ಇತ್ಯಾದಿ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಹಸಿ ಮತ್ತು ಒಣ ಕಸ ಹಾಕುವ ದೊಡ್ಡ ಬಿನ್ ಗಳನ್ನು ವಿತರಣೆ ಮಾಡಲಾಯಿತು.ಪ್ಲಾಸ್ಟಿಕ್ ಕೈಚೀಲ ಬದಲು ಬಟ್ಟೆಗಳ ಚೀಲ ಉಪಯೋಗಿಸುವ ಸಲುವಾಗಿ ಬಟ್ಟೆ ಚೀಲಗಳನ್ನು ವಿತರಣೆ ಮಾಡಲಾಯಿತು.

ಬಟ್ಟೆ ಚೀಲಗಳನ್ನು ವಿತರಣೆ ಮಾಡಿ ಮಾತನಾಡಿದ ಸ್ಥಳೀಯ ಶಾಸಕ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು, ಸ್ವಚ್ಛತೆಯ ಗ್ರಾಮ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಈ ಸೇವೆಯಲ್ಲಿ ಸಾಗರೋಪಾದಿಯಾಗಿ ಬಂದು ಭಾಗವಹಿಸಿದ ಗ್ರಾಮಸ್ಥರು, ಕೆ ಎಸ್. ಆರ್.ಪಿ , ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು,ಅಮ್ಮನವರ ಅಮಲ ಭಾರತ ತಂಡ,ಯುವ ಘಟಕ ಅಯುಧ್ ಮತ್ತು ಎಲ್ಲಾ ಸಂಘಟನೆಯ ಸೇವೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಕುಲಪತಿ ಪ್ರೊಫೆಸರ್ ಪಿ.ಎಸ್‌.ಯಡಪಡಿತ್ತಾಯ ಮಾತನಾಡಿ ಅಮ್ಮನವರ ಸಂಸ್ಥೆ, ಕೊಣಾಜೆ ಗ್ರಮ ಪಂಚಾಯತ್ ಮತ್ತು ವಿವಿಧ ಸಂಘಟನೆಗಳ ಜಂಟಿ ಕಾರ್ಯಾಚರಣೆಗಳ ಮೂಲಕ ಪ್ರಥಮಬಾರಿಗೆ ಬೃಹತ್ ಅಮಲ ಭಾರತ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ,ಇಂದು ಚಾಲನೆ ಪಡೆದ ಈ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೀತಿ ವಿಶ್ವಾಸ ಭರಿತ ಸ್ವಚ್ಚ, ಸ್ವಸ್ಥ ಮನಸ್ಸುಗಳಾಗಿ ಪರಿವರ್ತನೆಗೊಳಿಸುವ ನಿರಂತರ ಪ್ರಕ್ರಿಯೆಯಾಗುವಂತೆ ಶ್ರಮಿಸಲಾಗುವುದು ಎಂದರು.ಸಕಾರಾತ್ಮಕ ಸ್ಪಂದನೆಯ ಧನಾತ್ಮಕ ಚಿಂತನೆಯ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ (ಹೆಚ್. ಆರ್) ಶ್ರೀ ಬಿ.ಎಚ್.ವಿ ಪ್ರಸಾದ್, ಶ್ರೀ ಜನಾರ್ದನ್ ಆರ್.,ಕಮಾಂಡೆಂಟ್ ಕೆ ಎಸ್‌. ಆರ್.ಪಿ.- ಕೊಣಾಜೆ 7ನೆಯ ಬಟಾಲಿಯನ್,ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ನುಝರ್ ಶಾ ಪಟ್ಟೋರಿಯವರನ್ನು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು..

ಈ ಸಂದರ್ಭದಲ್ಲಿ ವಿಶ್ವ ಖ್ಯಾತಿಯನ್ನು ಹೊಂದಿರುವ ಯುವ ವಿಜ್ಞಾನಿ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಶ್ರೀ ಸ್ವಸ್ತಿಕ್ ಪದ್ಮ ಇವರು ಪ್ಲಾಸ್ಟಿಕ್ ಬಳಕೆಯ ಹಾನಿಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಅದರ ಪುನರ್ಬಳಕೆಯ ವಿಧಾನಗಳ ಬಗ್ಗೆ ಮಾತನಾಡಿದರು. ಮತ್ತು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು..

ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಸಮನ್ವಯಾಧಿಕಾರಿ ಪ್ರೊಫೆಸರ್ ವಿನೀತ ರೈ ಪ್ರತಿಜ್ಞಾ ವಿಧಿ ನೆರವೇರಿಸಿದರು.
ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ‌.ಜೀವರಾಜ್ ಸೊರಕೆ ಪ್ರಸ್ತಾವನೆ ಗೈದರು.

ಮಾತಾ ಅಮೃತಾನಂದಮಯಿ ಸೇವಶ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಗೋವಿಂದರಾಜು ಬಿ.ಎಮ್ ವಂದಿಸಿದರು. ವೇದಿಕೆಯಲ್ಲಿ ಎಮ್ ಆರ್ ಪಿ ಎಲ್ ನ ಜನರಲ್ ಮ್ಯಾನೇಜರ್ ಶ್ರೀ ಸುಬ್ರಾಯ ಭಟ್,ಮ್ಯಾನೇಜರ್ ಶ್ರೀಮತಿ ವೀಣಾ ಶೆಟ್ಟಿ., ಕೊಣಾಜೆ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ನಾಯಕ್,ಕಾಂಚನ ಹ್ಯೂಂಡೈ ಎಂ ಡಿ.ಶ್ರೀ ಪ್ರಸಾದ್ ರಾಜ್ ಕಾಂಚನ್, ಅಮಲ ಭಾರತ ಅಭಿಯಾನದ ಮುಖ್ಯ ಸಮನ್ವಯಾಧಿಕಾರಿ ಶ್ರೀ ಸುರೇಶ್ ಅಮಿನ್ ಮೊದಲಾದವರು ಉಪಸ್ಥಿತರಿದ್ದರು.

Comments are closed.