ಕರಾವಳಿ

ಹಿರಿಯರನ್ನು ಗೌರವಿಸಿ, ವೃದ್ಧಾಶ್ರಮಗಳ ಸಂಖ್ಯೆ ಇಳಿಮುಖವಾಗಿಸಿ : ಮೀನಾಕ್ಷಿ ಶಾಂತಿಗೋಡು

Pinterest LinkedIn Tumblr

ಮಂಗಳೂರು ಅಕ್ಟೋಬರ್ 02 : ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಇಳಿಮುಖವಾಗಬೇಕು. ಹಿರಿಯರನ್ನು ವಿಶೇಷವಾಗಿ ಗೌರವಿಸು ವುದನ್ನು ನಾವು ಅರಿಯಬೇಕು. ಆದರೆ, ಇಂದಿನ ಸಮಾಜ ಹಿರಿಯರನ್ನು ನೋಡಿಕೊಳ್ಳುವಲ್ಲಿ ಎಡವುತ್ತಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಹಿರಿಯರನ್ನು ಗೌರವಿಸುವ ಕ್ರಮವನ್ನು ಪ್ರತಿ ಪೋಷಕರು ತಿಳಿಸಿಕೊಡಬೇಕಿದೆ. ಹಿರಿಯರ ಉತ್ಸುಕುತೆಯನ್ನು ನೋಡುವಾಗ ಬಹಳ ಹೆಮ್ಮೆ ಆಗುತ್ತದೆ. ಸ್ಪರ್ಧೆಗಳಲ್ಲಿನ ಉತ್ಸುಕತೆಯನ್ನು, ಸಮಾಜ ಸೇವೆಗಳಲ್ಲಿ ತೊಡಗಿರುವ ಹಿರಿಯ ನಾಗರಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ. ಹುಟ್ಟಿದ ಪ್ರತಿಯೊಬ್ಬರಿಗೂ ಯೌವನ ಕಳೆದು ಮುಪ್ಪಿನ ದಿನ ಬಂದೇ ಬರುತ್ತದೆ. ಆ ಸಂಧರ್ಭಗಳಲ್ಲಿ ಅವರ ಯೋಗ-ಕ್ಷೇಮಗಳನ್ನು ವಿಚಾರಿಸುವ ಕ್ಷಮತೆ ನಮ್ಮಲ್ಲಿರಬೇಕು ಎಂದರು.

ಹಿರಿಯರನ್ನು ಗೌರವಿಸುವ ಪುಣ್ಯ ಕಾರ್ಯ ಬೇರೊಂದಿಲ್ಲ. ಹಿರಿಯ ನಾಗರಿಕರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಉತ್ಸುಕತೆಯನ್ನು ಹೊರಹಾಕಿದ್ದಾರೆ. ಹಿರಿಯರನ್ನು ಗೌರವಿಸಲು ಸರ್ಕಾರ ಮುಂದಾಗಿ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹಿರಿಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ವಿಕಲಚೇತನ ಕಲ್ಯಾಣಧಿಕಾರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯಮುನಾ ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಸ್ಮಾನ್ ಉಪಸ್ಥಿತರಿದ್ದರು.

Comments are closed.