ಕರಾವಳಿ

ಮದ್ಯವ್ಯಸನಿ ತಂದೆ ವಶದಿಂದ 6 ವರ್ಷ ಪಾಯದ ಗಂಡು ಮಗುವನ್ನು ರಕ್ಷಿಸಿದ ಚೈಲ್ಡ್‌ಲೈನ್

Pinterest LinkedIn Tumblr

ಮಂಗಳೂರು : ಮದ್ಯವ್ಯಸನಿ ತಂದೆ ಅಮಲು ಪದಾರ್ಥ ಸೇವಿಸಿ ಮಲಗಿದ್ದ ಸಂದರ್ಭ ಒಬ್ಬಂಟಿಯಾಗಿದ್ದ ೬ ವರ್ಷ ಪಾಯದ ಗಂಡು ಮಗುವನ್ನು ಚೈಲ್ಡ್‌ಲೈನ್ ಸಿಬ್ಬಂದಿಗಳು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ ಘಟನೆ ಗುರುವಾರ ಮಂಗಳೂರಿನಲ್ಲಿ ನಡೆದಿದೆ.

ಸೆಪ್ಟಂಬರ್ ೬ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಮಗುವಿನ ತಂದೆಯು ಮದ್ಯಸೇವನೆಯಿಂದ ಮಲಗಿದ್ದು ಮಗುವೊಂದು ಒಬ್ಬಂಟಿಯಾಗಿದೆ ಸ್ಥಳದಿಂದ ರಕ್ಷಿಸಿ ಎಂಬುದಾಗಿ ಸಾರ್ವಜನಿಕರೋರ್ವರಿಂದ ಚೈಲ್ಡ್‌ಲೈನ್(೧೦೯೮)ದ.ಕ.ಜಿಲ್ಲೆಗೆ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ಚೈಲ್ಡ್‌ಲೈನ್-೧೦೯೮ ತಂಡವು ಕೂಡಲೇ ಬಂದರು ಠಾಣಾ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳಕ್ಕೆ ಆಗಮಿಸಿ ಒಬ್ಬಂಟಿಯಾಗಿದ್ದ ೬ ವರ್ಷ ಪ್ರಾಯದ ಗಂಡುಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸುವ ಮೂಲಕ ಸೂಕ್ತ ಪುನರ್ವಸತಿಯನ್ನು ಕಲ್ಪಿಸಲಾಗಿದೆ.

ಬಾಲಕನ ತಂದೆಯು ಪಾನಮತ್ತರಾಗಿದ್ದು ಯಾವುದೇ ದಾಖಲೆಗಳು ಕಂಡುಬಂದಿಲ್ಲದ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಗಲಾಟೆ ಮಾಡಿರುವ ಹಿನ್ನಲೆಯಲ್ಲಿ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ, ಮೂಲತಹ ಶಿವಮೊಗ್ಗ ಜಿಲ್ಲೆಯ ಬಧ್ರಾವತಿ ತಾಲೂಕಿನ ಬನ್ನಿಗುಡ್ಡೆ ಸ್ಥಳದವರಾಗಿದ್ದಾರೆ ಎಂಬುದಾಗಿ ಮಾಹಿತಿ ಬಂದಿರುತ್ತದೆ.
ಈ ರಕ್ಷಣಾ ತಂಡದಲ್ಲಿ ಚೈಲ್ಡ್‌ಲೈನ್-೧೦೯೮ ತಂಡ ಸದಸ್ಯರಾದ ಕೀರ್ತೇಶ್ ಕಲ್ಮಕಾರ್, ಸ್ವಯಂ ಸೇವಕರಾದ ರಂಜಿತ್ ಕಾಡುತೋಮ್ ಹಾಗೂ ಬಂದರ್ ಪೊಲೀಸ್ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.