ಕರಾವಳಿ

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 15ರವರೆಗೆ ಮಂಗಳೂರಿನ ಕಾಲೇಜುಗಳಿಗೆ ದಸರಾ ರಜೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಟ್ಟಿರುವ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ, ಸ್ವಾಯತ್ತ, ಘಟಕ ಪದವಿ ಮಟ್ಟದ ಕಾಲೇಜುಗಳಿಗೆ ಇದೇ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 15 ರವರೆಗೆ ದಸರಾ ರಜೆ ನೀಡುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 30 ರಿಂದಲೇ ನವರಾತ್ರಿಯ ಧಾರ್ಮಿಕ ವಿದಿವಿಧಾನಗಳನ್ನು ಆರಂಭವಾಗುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.

ಆದ್ದರಿಂದ ಸೆಪ್ಟೆಂಬರ್ 30 ರಿಂದ ರಜೆಗಳು ಆರಂಭವಾದ್ದಲ್ಲಿ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರಿಗೆ, ಶಿಕ್ಷಕರಿಗೆ, ಶಿಕ್ಷಕೇತರರಿಗೆ ದೇವಿ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಅದಕ್ಕಾಗಿ ರಜೆಯನ್ನು ಸೆಪ್ಟೆಂಬರ್ 30 ರಿಂದಲೇ ಮಂಜೂರು ಮಾಡಬೇಕು ಎಂದು ತಾವು ಉನ್ನತ ಶಿಕ್ಷಣ ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಅಶ್ವಥ್ ನಾರಾಯಣ್ ಅವರಿಗೆ ಮನವಿ ಮಾಡಿದ್ದೆ.

ನನ್ನ ಮನವಿಯನ್ನು ಪುರಸ್ಕರಿಸಿ ಆಶ್ವಥ್ ನಾರಾಯಣ್ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸುತ್ತೋಲೆ ನೀಡಿದ್ದಾರೆ. ಅದನ್ನು ಆದರಿಸಿ ಕುಲಸಚಿವರು ರಜೆ ನೀಡಲು ಸೂಚಿಸಿದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈಗಾಗಲೇ ಶಾಸಕ ಕಾಮತ್ ಅವರ ಮನವಿಯ ಮೇರೆಗೆ ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ದಸರಾ ರಜೆಯನ್ನು ಮಂಜೂರು ಮಾಡಿದ್ದನ್ನು ಸ್ಮರಿಸಬಹುದು. ತಮ್ಮ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರಕಾರಕ್ಕೆ ಧನ್ಯವಾದವನ್ನು ಶಾಸಕ ಕಾಮತ್ ಸಲ್ಲಿಸಿದ್ದಾರೆ

Comments are closed.