
ಮಂಗಳೂರು, ಸೆಪ್ಟಂಬರ್.09 : ಉಚ್ಚಿಲ ಬೋವಿ ಸಂಸ್ಥೆಗಳ ಶತಮಾನೋತ್ಸವ ಆಚರಣೆಯ ಸರಣಿ ಕಾರ್ಯಕ್ರಮವಾಗಿ ಜಿಲ್ಲಾಡಳಿತ, ಮಾತಾ ಅಮೃತಾನಂದಮಯಿ ಮಠ ,ಸೋಮೇಶ್ವರ ಪಟ್ಟಣ ಪಂಚಾಯತ್ , ಎಂ.ಆರ್.ಪಿ.ಎಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೋಮೇಶ್ವರ ಉಚ್ಚಿಲ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪರಿಸರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಲ್ಲಿ ಸೇವೆ ನೀಡಲು ನಿರ್ಧರಿಸಲಾಯಿತು.
ಭಾನುವಾರ ದಿನಾಂಕ 8/9/2019ರಂದು ಬೆಳಗ್ಗೆ7.30 ಕ್ಕೆ ಸ್ವಚ್ಚತಾ ಕಾರ್ಯ ಪ್ರಾರಂಭಗೊಂಡಿದ್ದು 8.30 ಕ್ಕೆ ಸರಳ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಸಭೆಯ ಅಧ್ಯಕ್ಷತೆಯನ್ನುಮಾಜಿ ಸಚಿವ ಹಾಗೂ ಶಾಸಕರಾದ ಶ್ರೀ ಯು.ಟಿ.ಖಾದರ್ ವಹಿಸಿದ್ದರು.ಅವರು ಡೆಂಗ್ಯೂ ಹಾಗೂ ಸ್ವಚ್ಚತೆ ಬಗ್ಗೆ ಮುದ್ರಿಸಲಾದ ಕರಪತ್ರ ಬಿಡುಗಡೆಗೊಳಿಸಿಮಾತನಾಡಿ ನಾವು ಪ್ರಕೃತಿ ಮತ್ತು ಸಂಸ್ಕೃತಿಗೆ ಹತ್ತಿರವಾಗಬೇಕಿದೆ, ಪ್ರಕೃತಿಯಿಂದ ದೂರ ಸರಿದಿರುವುದೇ ಇಂದಿನ ಸಮಸ್ಯೆಗಳಿಗೆ ಕಾರ್ಣವಾಗಿದೆ., ಘನತ್ಯಾಜ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಶ್ರೀ ಪಿ.ಎಸ್.ಯಡಪಡಿತ್ತಾಯ ಇವರು ಈ ಬೃಹತ್ ಸ್ವಚ್ಚತಾ ಆಂದೋಲನಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಅವರು ಮಾತನಾಡಿ ಕಂಡ ಕಂಡಲ್ಲಿ ಉಗುಳುವ ಪ್ರವೃತ್ತಿ ನಿಲ್ಲಬೇಕು,ಮಾತಾ ಅಮೃತಾನಂದ ಮಯಿ ದೇವಿಯವರ ಅಮಲ ಭಾರತ ಯೋಜನೆ ಹಾಗೂ ಸ್ವತಃ ಅಮ್ಮನವರೇ ಸ್ವಚ್ಚತಾ ಸೇವೆಯಲ್ಲಿ ಭಾಗವಹಿಸಿ ಇತರರಿಗೂ ಸ್ಪೂರ್ತಿ ತುಂಬುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಂತಹ ಉತ್ತಮ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಪರಿಸರ ರಕ್ಷಣಾ ಕಾರ್ಯಮಾಡುತ್ತಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.

ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ ಮಾತನಾಡಿ ಕಳೆದ 9 ವರ್ಷಗಳ ಸ್ವಚ್ಚತಾ ಸೇವೆಯ ಅನುಭವ,ಅದರ ಉದ್ದೇಶ ಹಾಗೂ ಸಫಲತೆಯ ಬಗ್ಗೆ ತಿಳಿಸಿ ಇಂದು ಎಲ್ಲೆಡೆಯೂ ಸ್ವಚ್ಛ ಭಾರತದ ಬಗ್ಗೆ ಜನರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಿ. ಎ. ವಾಮನ್ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಮನ್ವಯಾಧಿಕಾರಿ ಪ್ರೊಫೆಸರ್ ವಿನೀತ ರೈ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರಾಜೇಶ್ ಉಚ್ಚಿಲ್,ಗಣಪತಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಮಹೇಶ್ ಬೊಂಡಾಲ, ಬೋವಿ ಮಹಾಸಭಾ ಅಧ್ಯಕ್ಷರಾದ ಶ್ರೀ ಚಿದಾನಂದ ಉಚ್ಚಿಲ್,ಬೋವಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀ ದೇವದಾಸ್ ಟಿ. ಉಚ್ಚಿಲ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಶ್ರೀ ಎಂ.ಜಿ.ಖಜೆ ಅತಿಥಿಗಳಾಗಿ ಆಗಮಿಸಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಶ್ರೀ ಎನ್.ಜಿ.ಮೋಹನ್ ಸ್ವಾಗತಿಸಿದರು, ಶತಮಾನೋತ್ಸವ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶ್ರೀ ಪ್ರವೀಣ್ ಬಸ್ತಿ ವಂದಿಸಿದರು.ಡಾ.ದೇವದಾಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಈ ಸ್ವಚ್ಚತಾ ಆಂದೋಲನದಲ್ಲಿ ಅಮಲ ಭಾರತ ಅಭಿಯಾನ-ಸ್ವಚ್ಛತಾ ಜನ ಜಾಗರಣ ಯಜ್ಞ, ಮಾತಾ ಅಮೃತಾನಂದಮಯಿ ಮಠ ಮಂಗಳೂರು, ಬೋವಿ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ, ವಿದ್ಯಾರ್ಥಿಗಳು,ಸೈಂಟ್ ಅಲೋಶಿಯಸ್ ಕಾಲೇಜು,ಸೈಂಟ್ ಆಗ್ನೆಸ್ ಕಾಲೇಜು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ,ಕೆನರಾ ಕಾಲೇಜು ,ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು,ಕೋಣಾಜೆಯ ವಿದ್ಯಾರ್ಥಿಗಳು, ಆನಂದಾಶ್ರಮ ಪ್ರೌಢಶಾಲೆ, ಪರಿಜ್ಞಾನ ಪಿ.ಯು.ಕಾಲೇಜು,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸ್ಥಳೀಯ ವಿದ್ಯಾರ್ಥಿಗಳು,ಕೋಟೆಬಳಿಯ ಪೊನ್ನಂಬಲವಾಸ ಅಯ್ಯಪ್ಪ ಭಜನಾ ಮಂಡಳಿ,ಉಚ್ಚಿಲದ. ಓಂಕಾರ್ ಫ್ರೆಂಡ್ಸ್,ಮುಬಾರಕ್ ವೆಲ್ಫೇರ್ ಅಸೋಸಿಯೇಶನ್, ಸ್ನೇಹ ಸಂಗಮ,ಕೋಟೆಬಳಿ ಫ್ರೆಂಡ್ಸ್, ಸೋಮೇಶ್ವರದ ಶ್ರೀ ರಕ್ತೇಶ್ವರಿ ಬಳಗ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ರೋಹಿತಾಕ್ಷ ,ಅಮಲ ಭಾರತ ಅಭಿಯಾನದ ಪ್ರಧಾನ ಸಮನ್ವಯಾಧಿಕಾರಿ ಶ್ರೀ ಸುರೇಶ್ ಅಮಿನ್, ಶ್ರೀ ಕೃಷ್ಣ ಶೆಟ್ಟಿ, ಶ್ರೀ ಮೋಹನ್ ಬಂಗೇರ,ರವಿ ಉಚ್ಚಿಲ್,ಮಾಧವ ಸುವರ್ಣ,ಚಂದ್ರಹಾಸ್ ಸುವರ್ಣ,ಪ್ರಕಾಶ್ ಠಕ್ಕರ್,ಪ್ರಕಾಶ್ ಕರ್ಕೇರ,ಸಿ.ಎ.ರಾಮ್ ನಾಥ್ ಮತ್ತಿತರರು ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸೇರಿ 500ಕ್ಕೂ ಅಧಿಕ ಮಂದಿ ಸೋಮೇಶ್ವರ ಉಚ್ಚಿಲ ಪರಿಸರದ ಹೈವೇ ರಸ್ತೆ, ಒಳರಸ್ತೆ ಬದಿ ಮತ್ತು ಸಮುದ್ರ ತೀರದಲ್ಲಿ ಹಲವು ತಂಡಗಳಲ್ಲಿ ಸೇವೆ ಸಲ್ಲಿಸಿದರು.
ಅಧಿಕ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಿದರು ಹಾಗೂ 6 ಟ್ರಕ್ ಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಕಳುಹಿಸಲಾಯಿತು.ಸ್ಥಳೀಯರ ಮನೆಮನೆಗಳಿಗೆ ತೆರಳಿ ಸ್ವಚ್ಚತಾ ಜನಜಾಗೃತಿ ಮೂಡಿಸುವ ಸಲುವಾಗಿ ಮುದ್ರಿತ ಕರಪತ್ರಗಳನ್ನು ಹಂಚಲಾಯಿತು,ಸ್ವಚ್ಚ ಪರಿಸರ ಕಾಪಾಡಲು ವಿನಂತಿಸಲಾಯಿತು.
Comments are closed.