ರೋಟರಿಯಿಂದ ಶಿಕ್ಷಕರ ಪ್ರತಿಭಾನ್ವೇಷಣೆ ಸ್ಪರ್ಧೆ – ಗುರುವಂದನ 2019 ಕಾರ್ಯಕ್ರಮ

ಮಂಗಳೂರು : “ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ರೋಟರಿ ಕ್ಲಬ್ ಮಂಗಳೂರು ಸೀಸೈಡ್ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು.

ಅವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ವಾಗಿ ನಗರದ ರೋಟರಿ ಕ್ಲಬ್ ಮಂಗಳೂರು ಸೀಸೈಡ್ ವತಿಯಿಂದ ರವಿವಾರ ನಗರದ ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಕರ ಪ್ರತಿಭಾನ್ವೇಷಣೆ ಸ್ಪರ್ಧೆ – ಗುರುವಂದನ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ಈಗಾಗಲೇ ಶಿಕ್ಷಕರ ಹಲವಾರು ಬೇಡಿಕೆಗಳ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ನೂರಕ್ಕೆ ನೂರರಷ್ಟು ನ್ಯಾಯ ದೊರಕಿಸಿಕೊಡಲು ತಾನು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಒಂದು ಕ್ಲಬ್ ಉತ್ತಮವಾಗಿ ಕಾರ್ಯನಿರ್ವಾಹಿಸಲು ಅದರ ಅಧ್ಯಕ್ಷರ ಪಾತ್ರ ಕೂಡ ತುಂಬಾ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಮಂಗಳೂರು ಸೀಸೈಡ್ ನ ಅಧ್ಯಕ್ಷರಾದ ವಾಸುದೇವ್ ಕಾಮಾತ್ ಅವರ ಪಾತ್ರ ಶ್ಲಾಘನೀಯ ಎಂದು ಕಾಮಾತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ಸಂಸ್ಥೆಯ ಕೆಲಸಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಲಬ್ ಇನ್ನಷ್ಟು ಉತ್ತಮ ಸೇವೆಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ರೋಟರಿ ವಲಯ 3ರ ಉಪ ರಾಜ್ಯಪಾಲರಾದ ಸುಮಿತ್ ರಾವ್ ಭಾಗವಹಿಸಿದ್ದರು.

ರೋಟರಿ ಅಧ್ಯಕ್ಷ ವಾಸುದೇವ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಯೋಜಕರಾದ ಶ್ರೀಕರ್ ಮತ್ತು ಅಜೇಯ್ ಹಾಗೂ ಪ್ರಮುಖ ಗಣ್ಯರಾದ ಸೂರ್ಯಪ್ರಕಾಶ ಭಟ್, ಮಾದವ ಸುವರ್ಣ, ರಾಜೇಂದ್ರ ಕಲ್ಭಾವಿ, ಯತೀಶ್ ಬೈಕಂಪಾಡಿ, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
By_Sathish Kapika, Mob : 9035089084
Comments are closed.