ಕರಾವಳಿ

ರೋನ್ಸ್ ಬಂಟ್ವಾಳ್ ನೇತ್ರತ್ವದ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದಿಂದ ದ.ಕ,.ಜಿಲ್ಲೆಯ ನೆರೆಪೀಡಿತ ಗ್ರಾಮಗಳಿಗೆ ಅಪಾರ ಪ್ರಮಾಣದ ಮಿನರಲ್ ವಾಟರ್,ಆಹಾರ ಸಾಮಗ್ರಿ,ದೈನಂದಿನ ವಸ್ತುಗಳ ರವಾನೆ

Pinterest LinkedIn Tumblr

ಮಂಗಳೂರು / ಮುಂಬಯಿ, ಆಗಸ್ಟ್.13: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರವು ದ.ಕ ಜಿಲ್ಲಾ ಪತ್ರಕರ್ತರ ಸಂಘಗಳು ಮೂಲಕ ಮಂಗಳವಾರ ಪ್ರವಾಹದಿಂದ ತೊಂದರೆಗೊಳಗಾದ ತೀರ ಬಡಜನರಿಗೆ ದೈನಂದಿನ ವಸ್ತುಗಳ ವಿತರಿಸಿ ಮಾನವೀಯತೆ ಮೆರೆಯಿತು.

ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಾರಥ್ಯದಲ್ಲಿ ಮುಂಬಯಿನಲ್ಲಿ ಸಂಗ್ರಹಿತ ಒಂದು ಲೋಡ್‌ನಷ್ಟು ದೈನಂದಿನ ವಸ್ತುಗಳು ಮಂಗಳವಾರ ಮಂಗಳೂರು ತಲುಪಿದ್ದು ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ ಮಂಗಳೂರಿನಲ್ಲಿ ಸ್ವೀಕರಿಸಿ ಬೆಳ್ತಂಗಡಿ, ಚಾರ್ಮಾಡಿ ಇನ್ನಿತರ ಪ್ರವಾಹ ಪೀಡಿತ ಗ್ರಾಮಗಳಿಗೆ ಸಾಗಿಸಿ ಗ್ರಾಮಸ್ಥರಿಗೆ ಖುದ್ಧಾಗಿ ವಿತರಿಸಿದರು.

ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಕಾಂಗ್ರೇಸ್ ಕರ್ನಾಟಕ ರಾಜ್ಯಧ್ಯಕ್ಷ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಸುನೀಲ್ ಪಾಯ್ಸ್ ಅವರು ಮಂಗಳೂರುನ ಸ್ಟೇಟ್‌ಬ್ಯಾಂಕ್‌ನಲ್ಲಿ ವಸ್ತುಗಳ ವಿತರಣಾ ಸೇವೆಗೆ ಚಾಲನೆಯನ್ನಿತ್ತು ಶುಭಕೋರಿದರು.

ಈ ಸಂದರ್ಭಸುನೀಲ್ ಪಾಯ್ಸ್ ಮಾತನಾಡಿ, ಸಂತ್ರಸ್ತರಿಗೆ ಸಹಕರಿಸುವ ಮೂಲಕ ನೊಂದವರ ಬಾಳಿಗೆ ಸ್ಫೂರ್ತಿ ತುಂಬುವ ಕಾರ್ಯ ಇದಾಗಿದೆ. ದಾನಿಗಳ ಔದಾರ್ಯದಿಂದ ಸಂತ್ರಸ್ತರ ದಿನಬಳಕೆ ವಸ್ತುಗಳನ್ನು ಪೂರೈಸಲು ರೋನ್ಸ್ ಬಂಟ್ವಾಳ್‌ಗೆ ಸಾಧ್ಯವಾಗಿದೆ. ಇಂದು ಸುಮಾರು ಮೂರುವರೆ ಲಕ್ಷ ಬೆಳೆಬಾಳುವ ದೈನಂದಿನವಾಗಿ ಬೇಕಾಗುವ ಆಹಾರ ವಸ್ತುಗಳು, ಬಿಸ್ಕೇಟು, ಟೋಸ್ಟ್, ರಸ್ಕ್, ಸಾಬೂನು, ಪೇಸ್ಟ್, ಟೂತ್‌ಬ್ರೆಶ್, ಶೂ-ಚಪ್ಪಲ್, ಬಟ್ಟೆಬರೆ ಸಂಗ್ರಹಿಸಿ ಕರ್ನಾಟಕ ರಾಜ್ಯದ ಜನತೆಗೆ ತಲುಪಿಸಿದೆ.

ಇದು ಎರಡನೇ ಹಂತವಾಗಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವಾಗಿದ್ದು, ಜಿಲ್ಲೆಯ ಜನರ ನೋವಿಗೆ ಸ್ಪಂಧಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ದಾನಿಗಳು ಮತ್ತು ಮಹಾರಾಷ್ಟ್ರದ ಪ್ರತಿಯೊಬ್ಬರಿಗೂ ಚಿರ‌ಋಣಿ ಎಂದರು.

ಪತ್ರಕರ್ತರಾದ ವಸಂತ್.ಎನ್ ಕೊಣಾಜೆ, ಆರೀಫ್ ಕಲ್ಕಟ್ಟ, ಮೋಹನ್ ಕುತ್ತಾರ್, ಅಶ್ವಿನ್ ಕುತ್ತಾರ್, ಕೀರ್ತನ್ ಮರೋಳಿ, ತೇಜೇಶ್ ಗಟ್ಟಿ, ಚಿಂತನ್ ಕುಮಾರ್, ಉದ್ಯಮಿಗಳಾದ ಸಹಬಾಝ್ ಖಾದರ್, ಮುಜೀಬ್ ರೆಹ್ಮಾನ್ ವಿತರಣಾ ಸೇವೆಯಲ್ಲಿ ಸಹಕರಿಸಿದರು.

ಶಿವಾಸ್ ಹೇರ್ ಡಿಝೈನರ್‍ಸ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಮತ್ತು ಗುಜರಾತ್ ಬಿಲ್ಲವ ಸಂಘ ಇದರ ವತಿಯಿಂದ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಪ್ರಧಾನ ಕೋಶಾಧಿಕಾರಿ ಜಿನರಾಜ್ ಪೂಜಾರಿ, ಸರಿತಾ ಸೋಮನಾಥ್ ಪೂಜಾರಿ ಮತ್ತು ಸಂಘದ ವಿವಿಧ ಶಾಖೆಗಳು ಮತ್ತು ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರ, ದಾನಿಗಳ ಸೇವಾರ್ಥವಾಗಿ ಬುಧವಾರ ಮೂರನೇ ಹಂತವಾಗಿ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳನ್ನು ಪ್ರದಾನಿಸಲಾಗುವುದು ಎಂದು ಆರೀಫ್ ಕಲ್ಕಟ್ಟಾ ತಿಳಿಸಿದರು.

ಕಪಸಮ ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಸಕ್ರೀಯ ಸದಸ್ಯೆ ತಾರಾ ಆರ್.ಬಂಟ್ವಾಳ್, ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ (ದಯಾನಂದ್ ಸಾಲ್ಯಾನ್), ದೇವರಾಜ್ ಪೂಜಾರಿ ಡೊಂಬಿವಿಲಿ, ಕೃಷ್ಣ ಬಂಗೇರಾಮತ್ತಿತರರು ಉಪಸ್ಥಿತರಿದ್ದು ಕಾರ್ಯನಿರ್ವಹಿಸಿ ಸಹಕರಿಸಿದ್ದರು.

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದಿಂದ ಒಂದು ಲಕ್ಷ ಮೌಲ್ಯದ ಮಿನರಲ್ ವಾಟರ್ ಹಾಗೂ ಆಹಾರ ಸಾಮಗ್ರಿ ರವಾನೆ

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘವು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಕದ್ರಿಯ ಕೆಪಿಟಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿರುವ ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಒಂದು ಲಕ್ಷ ಮೌಲ್ಯದ ಮಿನರಲ್ ವಾಟರ್ ಹಾಗೂ ಆಹಾರ ಸಾಮಗ್ರಿಗಳನ್ನು ರವಿವಾರ ರವಾನಿಸಿತ್ತು.

ಈ ಸಂದರ್ಭ ಮಾತನಾಡಿದ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಗೋಕುಲ್‌ದಾಸ್ ನಾಯಕ್, ರೋನ್ಸ್ ಬಂಟ್ವಾಳ್ ಸಾರಾಥ್ಯದ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಿಸ್ಕೆಟ್, ಕುಕೀಸ್, ಮಿನರಲ್ ವಾಟರ್ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಹಸ್ತಾಂತರ ಮಾಡಿದ್ದಾರೆ. ಇದು ಶ್ಲಾಘನೀಯ ವಿಚಾರ. ಸಂಗ್ರಹಿಸಿದ ಸಾಮಗ್ರಿಗಳನ್ನು ದ.ಕ. ಜಿಲ್ಲೆಗೆ ಬಳಸಿಕೊಳ್ಳಲಾಗುವುದು. ಹೊರಜಿಲ್ಲೆಯಿಂದಲೂ ಬೇಡಿಕೆ ಬಂದಿದೆ ಎಂದು ಹೇಳಿದರು.

ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ ಮಾತನಾಡಿ, ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನತೆ ಸಂತ್ರಸ್ತರಾಗಿದ್ದಾರೆ. ಲಕ್ಷಾಂತರ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಪ್ರವಾಹ ಉಂಟಾಗಿ ಜನತೆ ಎಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸೋಮವಾರವೂ ಕೂಡ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದಿಂದ ಸಾಕಷ್ಟು ಸಂಖ್ಯೆಯಲ್ಲಿ ಬಟ್ಟೆಗಳು, ಬ್ಲಾಂಕೇಟ್, ಅಡುಗೆ ಪಾತ್ರೆಗಳನ್ನು ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದರು.

ಅದರಂತೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರವು ದ.ಕ ಜಿಲ್ಲಾ ಪತ್ರಕರ್ತರ ಸಂಘಗಳು ಮೂಲಕ ಮಂಗಳವಾರ ಪ್ರವಾಹದಿಂದ ತೊಂದರೆಗೊಳಗಾದ ತೀರ ಬಡಜನರಿಗೆ ದೈನಂದಿನ ವಸ್ತುಗಳ ವಿತರಿಸಿ ಮಾನವೀಯತೆ ಮೆರೆಯಿತು.

Comments are closed.