ಕರಾವಳಿ

ಅ,16, 17, 18 : ಮಂಗಳೂರಿನ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ 

Pinterest LinkedIn Tumblr

ಮಂಗಳೂರು : ಮಂಗಳೂರಿನ ಜೋಡುಮಠ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನ ಟ್ರಸ್ಟ್ ವತಿಯಿಂದ ಅಗಸ್ಟ್ 16, 17, 18 ರಂದು ಮೂರು ದಿನಗಳ ಪರ್ಯಂತ ಶ್ರೀ ರಾಘವೇಂದ್ರ ಗುರುಸಾವ೯ಭೌಮರ 348ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಈ ಮೂರೂ ದಿನವೂ ಬೆಳಿಗ್ಗೆ ನಿಮಾ೯ಲ್ಯ ವಿಸಜ೯ನೆ, ಪಂಚಾಮೃತ ಅಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಅಲಂಕಾರ ಪಂಕ್ತಿ, ಕನಕಾಭಿಷೇಕ, ಮಹಾಪೂಜೆ ಬಳಿಕ ಅನ್ನಸಂತಪ೯ಣೆ ನಡೆಯಲಿದೆ.

ರಾತ್ರಿ 7ರಿಂದ ರಜತ ರಥೋತ್ಸವ , ರಜತ ಪಾಲಕಿ ಉತ್ಸವ , ತೊಟ್ಟಿಲಸೇವೆ , ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿರುವುದು. ಇದಲ್ಲದೆ ಪ್ರತಿದಿನ ವಿವಿಧ ಕಲಾ ತಂಡಗಳಿಂದ ಹಾಗೂ ಕಲಾವಿದರಿಂದ ಭಜನೆ ,ನಾದಲಹರಿ , ಭಕ್ತಿಗಾನ , ದಾಸರ ಪದ , ಭರತನಾಟ್ಯ ,ಯಕ್ಷಗಾನ ಬಯಲಾಟ ಇತ್ಯಾದಿ ಸಾಂಸ್ಕೃತಿಕ ಕಾಯ೯ಕ್ರಮಗಳೂ ಜರಗಲಿವೆ ಎಂದು ಪ್ರಕಟಣೆ ತಿಳಿಸಿದೆ .

Comments are closed.