ಕರಾವಳಿ

ಮಂಗಳೂರು – ಪೂನಾ, ಮಂಗಳೂರು – ಬೆಂಗಳೂರು ನಡುವೆ ವಿಮಾನ ಸಂಚಾರಕ್ಕೆ ಸಂಸದ ನಳಿನ್‌ರಿಂದ ಮನವಿ

Pinterest LinkedIn Tumblr

ಮಂಗಳೂರು / ನವದೆಹಲಿ : ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಬುಧವಾರ ( 07/08/2019) ಕೇಂದ್ರ ನಾಗರೀಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖೇರಾಲ್ ಇವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಂಗಳೂರು – ಪೂನಾ ಹಾಗೂ ಮಂಗಳೂರು – ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿದರು.

ಸಂಸದರ ಮನವಿಗೆ ಸ್ಪಂದಿಸಿದ ಕಾರ್ಯದರ್ಶಿಯವರು ಅತಿ ಶೀಘ್ರದಲ್ಲಿ ಮಂಗಳೂರು – ಪೂನಾ ಹಾಗೂ ಮಂಗಳೂರು – ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದರು.

Comments are closed.