ಕರಾವಳಿ

ಲಯನ್ಸ್ ಸಂಸ್ಥೆ ನೊಂದವರ ಬದುಕಿಗೆ ಆಶಾಕಿರಣ : ಜಿಲ್ಲಾ ಸಂಪುಟ ಪದಗ್ರಹಣ “ಚಿಗುರು” ಉದ್ಘಾಟಿಸಿ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್

Pinterest LinkedIn Tumblr

ಮಂಗಳೂರು,ಅಗಸ್ಟ್.04: ಸಮಾಜದ ವಿವಿಧ ಸ್ತರಗಳಲ್ಲಿ ನೆರವಿಗಾಗಿ ಕಾಯುವವರ ಬದುಕಿಗೆ ಆಶಾಕಿರಣವಾಗಿ ಲಯನ್ಸ್ ಸಂಸ್ಥೆ ಕಾರ್ಯಚರಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಹೆಚ್ಚಿನ ಚಟುವಟಿಕೆಗಳ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದು ಲಯನ್ಸ್ 317ಡಿ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್ ಹೇಳಿದರು.

ನಗರದ ಮಿಲಾಗ್ರೀಸ್ ಸಂಭಾಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಂತಾರಾಷ್ಟೀಯ ಲಯನ್ಸ್ ಸಂಸ್ಥೆಯ 317 ಡಿ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭ “ಚಿಗುರು” ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿ ಮಂಗಳೂರು ಬಿಶಪ್ ರೈ.ರೆ ಡಾ ಪೀಟರ್ ಪೌಲ್ ಸಲ್ಡಾನ್ಹಾ ಅಶೀರ್ವಚನ ನೀಡಿದರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಯನ್ಸ್ ಕ್ಲಬ್ ಹಲವಾರು ವರ್ಷಗಳಿಂದ ಮಹತ್ತರ ಕೆಲಸ ಮಾಡಿದೆ. ಸಂಘ-ಸಂಸ್ಥೆಗಳು ಸಮಾಜ ಮುಖಿ ಚಿಂತನೆಯೊಂದಿಗೆ ಕಾರ್ಯ ಪ್ರವೃತ್ತವಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂತಹ ಕಾರ್ಯದಲ್ಲಿ ಲಯನ್ಸ್ ಸಂಸ್ಥೆ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧಕ್ಷತೆ ವಹಿಸಿದ್ದ ಲಯನ್ಸ್ ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ಅವರು ಮಾತನಾಡಿ, ನಾವು ನಮ್ಮ ಪರಿಸರದ ಬಗ್ಗೆ ಹೆಚ್ಚು ಗಮನಹರಿಸಬೇಕು. ಪ್ರತಿಯೊಬ್ಬರು ಕನಿಷ್ಟ ಒಂದು ಸಸಿಯನ್ನದರೂ ನೆಡುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿದ್ದರೆ ನಮ್ಮ ಜೀವನವು ಸುಂದರವಾಗಿರುತ್ತದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಲಯನ್ಸ್‌ನ ಮಾಜಿ ನಿರ್ದೇಶಕ ವಿಜಯ ಕುಮಾರ್ ರಾಜು ಅವರು ಲಯನ್ಸ್ ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ಹಾಗೂ ಸಂಪುಟದ ಪಧಾಧಿಕಾರಿಗಳ ಪದಗ್ರಹಣ ನೆರೆವೇರಿಸಿದರು. ಅಂತಾರಾಷ್ಟ್ರೀಯ ಲಯನ್ಸ್‌ನ ಮಾಜಿ ನಿರ್ದೇಶಕ ವಿ.ಕೃಷ್ಣ ರೆಡ್ಡಿ ಸಾಧಕರನ್ನು ಸಮ್ಮಾನಿಸಿದರು.

ಮಲ್ಟಿಪಲ್ ಕೌನ್ಸಿಲ್ ಮಾಜಿ ಚೇರ್‌ಮನ್ ಸೀತಾರಾಮ ಎಚ್.ಟಿ, ಅಂತಾರಾಷ್ಟ್ರೀಯ ಲಯನ್ಸ್‌ನ ಎಂಡೋರ್ಸ್ ನಿರ್ದೇಶಕ ವಂಸಿದಾರ್ ಬಾಬು, ಜಿಲ್ಲಾ ಪ್ರಥಮ ವೈಸ್ ಗವರ್ನರ್ ಡಾ.ಗೀತಾ ಪ್ರಕಾಶ್, ದ್ವಿತೀಯ ವೈಸ್ ಗವರ್ನರ್ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಖಾಂಜಾಚಿ ಹರೀಶ್ ಕೆ ಶೆಟ್ಟಿ, ಜಿಲ್ಲಾ ಸಂಪುಟ ಸಂಚಾಲಕ ತಾರಾನಾಥ ಶೆಟ್ಟಿ ಬೋಳಾರ್, ಜಿಲ್ಲಾ ಸಂಪುಟ ಸಹ ಸಂಚಾಲಕ ಅಶೋಕ್ ಶೇಟ್, ಡಿಜಿ ಸಂಚಾಲಕಿ ವಾಣಿ ವಿ.ಆಳ್ವ, ಪಿಆರ್‌ಒ ಸುರೇಶ್ ಎ.ರೈ, ಜಿಲ್ಲಾ ಲಿಯೋ ಅಧ್ಯಕ್ಷೆ ಶೀಬಾ ಉಳ್ಳಾಲ, ಕುಡ್ಪಿ ಅರವಿಂದ್ ಶೆಣೈ, ಭಾರತಿ ಬಿ.ಎಂ, ಲೋಕೇಶ್ ಬೋಳಾರ್ ಉಪಸ್ಥಿತರಿದ್ದರು.

ಕೋರ್ ಸಮಿತಿ ಮತ್ತು ಜಿಲ್ಲಾ ಕ್ಯಾಬಿನೆಟ್ ಸಮಿತಿ ಸದಸ್ಯರು

ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಿಜಯ ವಿಷ್ಣು ಮಾಯ್ಯ, ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಹರೀಶ್ ಕೆ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ಸಂಚಾಲಕ ತಾರ್ನಾಥ್ ಶೆಟ್ಟಿ ಬೋಳಾರ್, ಜಿಲ್ಲಾ ಕ್ಯಾಬಿನೆಟ್ ಸಹ ಸಂಚಾಲಕ ಅಶೋಕ್ ಶೇಟ್, ಡಿಜಿ ಕಾರ್ಡಿನೇಟರ್ ವಾಣಿ ವಿ ಅಳ್ವಾ, ಜಿಲ್ಲಾ ಪ್ರೊ ಮತ್ತು ಅಧ್ಯಕ್ಷ ಅನುಸ್ಥಾಪನಾ ಸಮಿತಿ ಸುರೇಶ್ ಎ ರೈ, ಜಿಲ್ಲಾ ಲಿಯೋ ಅಧ್ಯಕ್ಷ ಶೀಬಾ ಉಳ್ಳಾಲ್, ಅಧ್ಯಕ್ಷ ಅನುಸ್ಥಾಪನಾ ಸಮಿತಿ ಕುಡ್ಪಿ ಅರವಿಂದ್, ಕಾರ್ಯದರ್ಶಿ ಸ್ಥಾಪನಾ ಸಮಿತಿ ಭಾರತಿ ಬಿ.ಎಂ ಮತ್ತು ಖಜಾಂಚಿ ಸ್ಥಾಪನಾ ಸಮಿತಿ ಲೋಕೇಶ್ ಬೋಳಾರ್.

_Sathish Kapikad

Comments are closed.