ಕರಾವಳಿ

ಕರುವಿನ ಮೇಲೆ ಅತ್ಯಾಚಾರ ನಡೆಸಿದ ಯುವಕ : ಮಂಗಳೂರಿನಲ್ಲಿ ಅಮಾನುವೀಯ ಘಟನೆ

Pinterest LinkedIn Tumblr

ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

ಮಂಗಳೂರು,ಜುಲೈ. 18 : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್‌ಬೈಲ್ ಎಂಬಲ್ಲಿ ಯುವಕನೋರ್ವ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಬಿಹಾರ ಮೂಲದ ಜಾರ್ಖಂಡ್ ನಿವಾಸಿ ಕೂಲಿ ಕಾರ್ಮಿಕ ಮೊಹಮ್ಮದ್ ಅಜರ್ ಅನ್ಸಾರಿ ಎಂಬಾತ ದನದ ಕರುವಿನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ.

ಕುಂಜತ್‌ಬೈಲ್ ಸಮೀಪದ ಗದ್ದೆಯೊಂದರಲ್ಲಿ ಮೇಯಲು ಕಟ್ಟಿ ಹಾಕಿದ ಕರುವಿನ ಮೇಲೆ ಮೊಹಮ್ಮದ್ ಅನ್ಸಾರಿ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಸ್ಥಳೀಯರು ವಿಡೀಯೋ ಮಾಡಿದ್ದರು. ಬಳಿಕ ಆತನಿಗೆ ಸರಿಯಾಗಿ ಥಳಿಸಿ ಅಲ್ಲಿಂದ ಓಡಿಸಿದ್ದರು. ಮಾತ್ರವಲ್ಲದೇ ಬಳಿಕ ಈ ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ವಿಕೃತ ಕಾಮಿ ಮೊಹಮ್ಮದ್ ಅಜರ್ ಅನ್ಸಾರಿ ವಿರುದ್ದ ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಪ್ರಕರಣ ದಾಖಲಿಸಿದ ಕಾವೂರು ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಮಾಡಿದ ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ವೈರಲ್ ಮಾಡಿದ ಆರೋಪಿಗಳಾದ ಅಭಿ, ಸುಶಾಂತ್ ಹಾಗೂ ಪ್ರಜ್ವಲ್ ಎಂಬವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Comments are closed.