ಕರಾವಳಿ

ಖಾಸಗಿ ಶಾಲೆಗಳೂ ಉನ್ನತ ಮಟ್ಟಕ್ಕೇರಬೇಕು : ಡಿಸಿಪಿ ಹನುಮಂತರಾಯ

Pinterest LinkedIn Tumblr

ಮಂಗಳೂರು: ಖಾಸಗಿ ಶಾಲೆ, ಆಸ್ಪತ್ರಗಳಂತೆ ಉನ್ನತ ಮಟ್ಟಕ್ಕೆ ಸರ್ಕಾರಿ ಸೇವೆಗಳು ಕೂಡ ಏರಬೇಕು ಎಂದು ಪೋಲಿಸ್ ಉಪ ಆಯುಕ್ತ ಹನುಮಂತರಾಯ ಎಸ್ ಹೇಳಿದರು.

ಗರೋಡಿ ಸ್ಟೀಲ್ಸ್ ವತಿಯಿಂದ ಗುರುವಾರ ಬಿಕರ್ನಕಟ್ಟೆ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಎಸ್‌ಡಬ್ಲ್ಯೂ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಕೊಡೆ, ಪುಸ್ತಕ, ಬ್ಯಾಗ್ ವಿತರಣೆ, ಶಾಲೆಗೆ ನೀರಿನ ವ್ಯವಸ್ಥೆ ಹಾಗೂ ಇನ್‌ವರ್ಟರ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಕಲಿತವರೇ ಹೆಚ್ಚಿನ ಸಾಧನೆಗಳನ್ನು ಮಾಡಿದ್ದಾರೆ. ಸರ್ಕಾರಿ ಸೌಲಭ್ಯಗಳು ಎಂದಿಗೂ ಕಳೆಗುಂದಬಾರದು.‌ ನೆರವು ಬೇಕಾಗಿರುವವರಿಗೆ ನೆರವು ನೀಡುವ ಮೂಲಕ ಶಕ್ತಿಯುತ ಸಮಾಜಕ್ಕೆ ನಮ್ಮಿಂದಾಗುವ ಕಾಣಿಕೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಮಂಗಳೂರು ಡಯಟ್ ನೋಡಲ್ ಅಧಿಕಾರಿ ಗೀತಾ ದೇವದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞ ಡಾ.ಶಾಂತರಾಮ ಬಾಳಿಗ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿಗಳಾದ ಮನೋಜ್ ಸರಿಪಳ್ಳ, ಬಿಂಬಾ ಮನೋಜ್, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮೋಹನ್ ಬಂಗೇರ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ರಾಜೀವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶಾಂತಿ ಲೀನಾ ಪಾಯಸ್ ವಂದಿಸಿದರು.

Comments are closed.