ಕರಾವಳಿ

ಇಂದು ರಾತ್ರಿ ಪಿಲಿಕುಳದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ

Pinterest LinkedIn Tumblr

file Photo

ಮಂಗಳೂರು, ಜುಲೈ.16: ಮಂಗಳೂರಿನ ಹೊರವಲಯದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜುಲೈ 16ನೇ ತಾರೀಕು (ಮಂಗಳವಾರ) ರಾತ್ರಿ ಸಂಭವಿಸುವ ಚಂದ್ರ ಗ್ರಹಣ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಗುರು ಮತ್ತು ಶನಿ ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಬಹುದು.

ಈ ಸಮಯದಲ್ಲಿ ಗ್ರಹಣಗಳ ಬಗ್ಗೆ ನಕ್ಷತ್ರ ಸಮೂಹಗಳ ಬಗ್ಗೆ ವಿವರಣೆ ನೀಡಲಾಗುವುದು. ಗ್ರಹಣವು ರಾತ್ರಿ ೧.೩೧ಕ್ಕೆ ಆರಂಭವಾಗಿ ಬೆಳಿಗ್ಗೆ 4.29ರ ವರೆಗೆ ಇರುವುದು. ಆಕಾಶ ವೀಕ್ಷಣಾ ಕಾರ್ಯಕ್ರಮವು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನಡೆಯಲಿದ್ದು ಸಾರ್ವಜನಿಕರು ಮತ್ತು ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

Comments are closed.