ಕರಾವಳಿ

ಮುಂಬಯಿ : ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಿಶೇಷ ಸಭೆ – ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ಮುಂಬಯಿ : ನಮ್ಮ ಹಿಂದೂ ಧರ್ಮದಲ್ಲಿ ಯುಗಾದಿಯಿಂದ ಶಿವರಾತ್ರಿ ತನಕ ವಿವಿಧ ರೀತಿಯ ಹಬ್ಬಗಳಿದ್ದು ಅದನ್ನು ನಾನಾ ವಿಧಗಳಲ್ಲಿ ಆಚರಿಸಲಾಗುತ್ತದೆ. ಆಟಿ ತಿಂಗಳು ಎಂದರೆ ಅಪವಾದವಲ್ಲ ಆಟಿಯೆಂದರೆ ಆರಾಧನೆ. ಯವುದಕ್ಕೂ ಶುಭ ಮುಹೂರ್ತಬೇಕಾಗಿದೆ. ಇಂದು ಆಮಂತ್ರಣ ಪತ್ರಿಕೆಯು ಶುಭ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ದಶಮಾನೋತ್ಸವದ ಮುಹೂರ್ತವು ಸುಮುಹೂರ್ತವಾಗಲಿ ಎಂದು ಕಾಂಜೂರು ಮಾರ್ಗ ಅಂಬಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವೇದಮೂರ್ತಿ ಪಿ. ಅನಂತ ಭಟ್ ನುಡಿದರು.

ಜು. 14 ರಂದು ಮಲಾಡ್ ಪೂರ್ವ ದ ಉತ್ಕರ್ಷ ಶಾಲಾ ಸಭಾಗೃಹ, ದಪ್ತರಿ ರೋಡ್, ಮಲ್ಕನಿ ಎಸ್ಟೇಟ್ ಪುಷ್ಪಾ ಪಾರ್ಕ್, ಇಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶಮಾನೋತ್ಸವ ಸಮಾರಂಭ ಹಾಗೂ 10ನೇ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ನಡೆದ ವಿಶೇಷ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಈ ಸಮಿತಿಯು ವರಮಹಾಲಕ್ಷ್ಮಿ ಪೂಜೆಯನ್ನು ಕಳೆದ ಒಂಬತ್ತು ವರ್ಷಗಳಿಂದ ನಡೆಸುತ್ತಾ ಬಂದಿದ್ದು ಇದೀಗ ಹತ್ತನೆಯ ವರ್ಷದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದು ಇದು ಮಹಾಲಕ್ಷ್ಮಿಯ ಅನುಗ್ರಹದಿಂದ ಸಾಧ್ಯವಾಗಿದೆ. ಶುದ್ಧ ಮನಸ್ಸಿನಿಂದ ಮಾಡುತ್ತಿರುವ ಆರಾದನೆಯಿಂದ ಯಶಸ್ವಿ ಸಾಧ್ಯ. ಇಲ್ಲಿನ ಗಣ್ಯರ ಸಾರಥ್ಯದಲ್ಲಿ ದೇವರ ಅನುಗ್ರಹದಿಂದ ದಶಮಾನೋತ್ಸವದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಲಾಡ್ ತತಾಸ್ತು ಪೌಂಡೇಶನ್ ನ ಅಧ್ಯಕ್ಷರಾದ ಸತೀಶ್ ಭಟ್ ಅವರು ಮಾತನಾಡುತ್ತಾ ಪರಶುರಾಮ ಸೃಷ್ಟಿಯ ನಾಡಲ್ಲಿ ಹುಟ್ಟಿದ ನಾವು ಕರ್ಮಭೂಮಿಯಾದ ಮಲಾಡ್ ನಗರದಲ್ಲಿ ವಿಜ್ರಂಭಣೆಯಿಂದ ನಡೆಯಲಿರುವ ಈ ಹತ್ತನೆ ಮಹಾ ವರ್ಷದ ಮಹಾಪೂಜೆಯು ವಿಜ್ರಂಭಣೆಯಿಂದ ಜರಗುದರೊಂದಿಗೆ ವರಮಹಾಲಕ್ಷ್ಮಿಯ ಎಲ್ಲಾ ಭಕ್ತರ ಮನೆಯಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.

ಬೊಂಬೆ ಬಂಟ್ಸ್ ಅಸೋಷಿಯೇಶನಿನ ಜೊತೆ ಕೋಶಾಧಿಕಾರಿ ಶಾಮ್ ಸುಂದರ ಶೆಟ್ಟಿ ಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸಮಾರಂಭಕ್ಕೆ ಶುಭ ಕೋರುತ್ತಾ ವಿವಿಧ ಸಮುದಾಯದವರು ಒಂದುಗೂಡಿ ಸಾಮೂಹಿಕ ವರಮಹಾಲಕ್ಷ್ಮಿಯ ಪೂಜೆ ಮಾಡುತ್ತಿರುವುದು ಅಭಿಮಾನದ ಸಂಗತಿ. ಸಾಮೂಹಿಕವಾಗಿ ಮಾಡುತ್ತಿರುವ ಈ ಪೂಜೆಗೆ ದೇವಿಯ ಅನುಗ್ರಹ ಖಂಡಿತವಾಗಿಯೂ ಇದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿಯವರು , ಶ್ರೀ ವರಮಹಾಲಕ್ಷ್ಮಿ ಪೂಜೆಯ ದಶಮಾನೋತ್ಸವದ ಕಾರ್ಯಕ್ರಮಕ್ಕೆ ನಾವು ಒಂದು ಉತ್ತಮ ಯೋಜನೆಯನ್ನು ಮಾಡಿದ್ದು ಇಂದು ಆಮಂತ್ರಣ ಪತ್ರಿಕೆಯನ್ನು ಕ್ರಮಭದ್ದವಾಗಿ ಬಿಡುಗಡೆ ಮಾಡಿದ್ದು ಇದು ಎಲ್ಲರ ಮನೆಗೂ ತಲಪುವಂತಾಗಲಿ. ಕೇಲವೇ ಪುರುಷರು ಅಭಿನಯಿಸಲಿರುವ ಅಂದಿನ ಯಕ್ಷಗಾನದಲ್ಲಿ ನಮ್ಮ ಸಮಿತಿಯ ಮಹಿಳೆಯರು, ಮಕ್ಕಳು ಅದರಲ್ಲೂ ಹೆಚ್ಚಿನವರು ಪ್ರಥಮ ಬಾರಿ ರಂಗಸ್ಥಳ ಪ್ರವೇಶಿಸುತ್ತಿರುವುದನ್ನು ನಾವು ಅಂದು ಕಾಣಬಹುದು. ಎಲ್ಲರ ಸಹಕಾರದಿಂದ ಅಂದಿನ ಸಮಾರಂಭವು ಖಂಡಿತವಾಗಿ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮವನ್ನು ನಿರ್ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಿತಿಯ ಸಂಚಾಲಕ ಬಿ. ದಿನೇಶ್ ಕುಲಾಲ್ ಅವರು ಅಂದಿನ ಕಾರ್ಯಕ್ರಮದಲ್ಲಿ ಇಲ್ಲಿನ ಹೆಚ್ಚಿನ ತುಳು ಕನ್ನಡಿಗ ಪ್ರತಿಭೆಗಳ ಅನಾವರಣಗೊಳ್ಳಲಿದ್ದು ಕಲಾಭಿಮಾನಿಗಳಿಗೆ ಹಾಗೂ ಭಕ್ತಾಭಿಮಾನಿಗಳಿಗೆ ಒಂದು ಉತ್ತಮ ಅನುಭವ ನೀಡಲಿರುವೆವು ಎಂದರು. ರತ್ನ ಡಿ ಕುಲಾಲ್ ಅವರು ಕಾರ್ಯಕ್ರಮದ ನಿರ್ವಹಣೆಗೆ ಸಹಕರಿಸಿದರು.

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಹತ್ತನೆಯ ಶ್ರೀ ವರಮಹಾಲಕ್ಷ್ಮಿ ಪೂಜೆಯ ದಶಮಾನೋತ್ಸವ ಸಮಾರಂಭವು ಆಗಷ್ಟು 18 ರಂದು ಮಲಾಡ್ ಪೂರ್ವದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ಆವರಣದಲ್ಲಿ ನಡೆಯಲಿದ್ದು, ಸಮಿತಿಯ ಸದಸ್ಯರಾದ ಸೂರಪ್ಪ ಕುಂದರ್ ಅವರು ದಶಮಾನೋತ್ಸವ ಕಾರ್ಯಕ್ರಮದ ವಿವರ ನೀಡಿದರು.

ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್,
ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಪೂಜಾರಿ ಬ್ರಹ್ಮಾವರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಯವರು ಮಾತನಾಡುತ್ತಾ ದಿನಪೂರ್ತಿ ನಡೆಯಲಿರುವ ದಶಮಾನೋತ್ಸವ ಸಮಾರಂಭವು ಎಲ್ಲರ ಪ್ರೋತ್ಸಾಹದಿಂದ ವಿಜ್ರಂಭಣೆಯಿಂದ ಯಶಸ್ವಿಯಾಗಿ ನಡೆಯಲಿದೆ ಎಂದರು.

ಮಲಾಡ್ ಚಾಮುಂಡೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಕುಮಾರ್ ಗೌಡ ಅವರು ಮಾತನಾಡುತ್ತ ಸಮಾರಂಭಕ್ಕೆ ಶುಭ ಕೋರಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಲಾಡ್ ಕುರಾರ್ ವಿಲೇಜ್ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರು ಮಾತನಾಡಿ ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಮಿತಿಯು ಕುರಾರ್ ವಿಲೇಜ್ ನಲ್ಲಿ ನಡೆಸುತ್ತಿರುವ ಧಾರ್ಮಿಕ ಕಾರ್ಯಕ್ರಮದ ದಶಮಾನೋತ್ಸವ ಸಮಾರಂಭಕ್ಕೆ ಶುಭ ಕೋರಿದರು.

ಶ್ವೇತಾ ಪೂಜಾರಿಯವರಿಂದ ನೃತ್ಯ ಹಾಗೂ ಮಹಿಳಾ ವಿಭಾಗದ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ಪ್ರಣಿತಾ ವರುಣ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಹಾಗೂ ಇತರ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್

Comments are closed.