
ಮಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮೈಸೂರಿನಲ್ಲಿ ಜೂನ್ 21ರಿಂದ 23 ರ ವರೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಓಪನ್ ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ಆಯುಷ್ ಲೆಹಲ್ ಮಹೇಶ್ ಇವರು 7 ರಿಂದ 9 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ 500 ಮೀ ರೋಡ್ ರೇಸ್, 500 ಮೀ ರಿಂಕ್ ರೇಸ್ ಮತ್ತು 1000 ಮೀ ರಿಂಕ್ ರೇಸ್ ನಲ್ಲಿ 3 ಚಿನ್ನದ ಪದಕವನ್ನ್ನು ಗೆದ್ದಿರುತ್ತಾರೆ.
ಆಯುಷ್ ಲೆಹಲ್ ಮಹೇಶ್ (8 ವರ್ಷ) ಇವರು ನಗರದ ಕೊಟ್ಟಾರ ಮಾಲಾಡಿ ಕೋರ್ಟ್ ನ ನಿವಾಸಿಗಳಾದ ಮಹೇಶ್ ಕುಮಾರ್ ಮತ್ತು ಸುಪ್ರೀತಾ ದಂಪತಿಯ ಪುತ್ರನಾಗಿದ್ದು, ನಗರದ ಲೂಡ್ ಸೆಂಟ್ರಲ್ ಸ್ಕೂಲ್ ನ 3ನೇ ತರಗತಿಯ ವಿದ್ಯಾರ್ಥಿ. ಇವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ hoigebail ನ ತರಬೇತಿದಾರರಾದ ಮೋಹನ್ ದಾಸ್. ಕೆ ಮತ್ತು ಜಯರಾಜ್ ರವರಿಂದ ತರಬೇತಿ ಪಡೆದಿದ್ದಾರೆ.
Comments are closed.