ಉಡುಪಿ: ಕಾರ್ಕಳ ಮಾಜಿ ಶಾಸಕರಾದ ಗೋಪಾಲ ಭಂಡಾರಿ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನಿಂದ ಮಧ್ಯಾಹ್ನ 2 ಘಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿದ್ದ ಗೋಪಾಲ್ ಭಂಡಾರಿಯವರು ಮಂಗಳೂರಿನ ಬಸ್ ನಿಲ್ದಾಣ ತಲುಪಿದ ನಂತರವೂ ಇಳಿಯದ್ದನ್ನು ಕಂಡ ನಿರ್ವಾಹಕರು ಪೊಲೀಸ್ ರಿಗೆ ತಿಳಿಸಿದರು. ನಂತರ ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು ಬಳಿಕ ವೈದ್ಯರು ಇದನ್ನು ದ್ರಡಪಡಿಸಿದ್ದಾರೆ.

ಇವರು ಕೆಲವು ವರ್ಷಗಳ ಕಾಲ ಕಾರ್ಕಳದ ಶಾಸಕರಾಗಿದ್ದು ಕಳೆದ ಬಾರಿ ಚುನಾವಣೆಯಲ್ಲಿ ಸುನೀಲ್ ಕುಮಾರ್ ವಿರುದ್ಧ ಸೋಲು ಅನುಭವಿಸಿದ್ದರು.
Comments are closed.