
ಮಂಗಳೂರು:. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರೀನ್ ಮಂಗಳೂರು ಯೋಜನೆಯ ಅಂಗವಾಗಿ ಹತ್ತು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಗೌರವಾನ್ವಿತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸತ್ಯನಾರಾಯಣ ಕಡ್ಲೂರು ಹಾಗೂ ಇತರ ನ್ಯಾಯಾಧೀಶರು ಸಮಕ್ಷಮದಲ್ಲಿ ನೆರವೇರಿತು.

ಮಂಗಳೂರು ಬಾರ್ ಎಸೋಸಿಯೇಶನ್ ನ ಪದಾಧಿಕಾರಿಗಳು, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಸೇರಿ ಗಿಡ ನೆಡುವ ಮೂಲಕ ಹಸಿರು ಪರಿಸರ ಮಾಡುವ ಯೋಜನೆಗೆ ಸಾಥ್ ನೀಡಿದರು.
Comments are closed.