ಕರ್ನಾಟಕ

ಪ್ರಿನ್ಸಿಪಲ್ ನಿಂದ ವಿದ್ಯಾರ್ಥಿನಿಗೆ ವಾಟ್ಸ್ ಆಫ್ ನಲ್ಲಿ ಅಶ್ಲೀಲ ಮೆಸೇಜ್!

Pinterest LinkedIn Tumblr


ಗದಗ: ವಿದ್ಯೆಯನ್ನು ನೀಡಬೇಕಾದ ಗುರುಗಳೇ ವಾಟ್ಸ್ ಆಫ್ ಮೆಸೇಜ್ ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ಗದಗದ ಬೆಟಗೇರಿಯ ಆದರ್ಶ ವಿದ್ಯಾ ಸಮಿತಿ ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಕಾಮುಕ ಪ್ರಿನ್ಸಿಪಲ್ ಬಸವರಾಜ್ ಎಂಬಾತನು ಅದೇ ಕಾಲೇಜಿನ ವಿದ್ಯಾರ್ಥಿನಿ ನಿವೇದಿತಾಗೆ ಪ್ರತಿ ನಿತ್ಯ ವಾಟ್ಸ್ ಆಫ್ ಮೆಸೇಜ್ ನಲ್ಲಿ ಅಶ್ಲೀಲವಾದ ಪೋಸ್ಟ್​ಗಳನ್ನು ಕಳುಹಿಸುತ್ತೀದ್ದನು. ವಾಟ್ಸ್ ಆಪ್ ವಿಡಿಯೋ ಕಾಲ್ ನಲ್ಲಿ ಅರೇ ಬೆತ್ತಲೆಯಾಗಿ ವಿಡಿಯೋ ಕಾಲ್ ನಲ್ಲೆ ಎಲ್ಲವನ್ನು ಮುಗಿಸಿ ಬಿಟ್ಟಿರುವ ಕಾಮುಕ ಪ್ರಿನ್ಸಿಪಲ್ ಬಸವರಾಜ್​ನ ಕರ್ಮಕಾಂಡವು ಇದೀಗ ವಿದ್ಯಾರ್ಥಿನಿ ನಿವೇದಿತಾ ಅವರ ಮನೆಯಲ್ಲಿ ಸಿಕ್ಕಿ ಬಿದ್ದಿದೆ.

ಇವರಿಬ್ಬರ ಕಾಮಲೀಲೆಯನ್ನು ಗಮನಿಸಿದ ಪೋಷಕರು ಕಾಲೇಜಿಗೆ ಬಂದು ಗಲಾಟೆ ಮಾಡಿದ್ದಾರೆ. ವಾಟ್ಸ್ ಆಪ್​ ನಲ್ಲಿ ಮಾಡಿರುವ ಕೆಲವೊಂದು ಮೆಸೇಜ್ ಗಳನ್ನು ಡೀಲಿಟ್ ಮಾಡಿದ್ದಾರೆ. ಕಾಮುಕ ಬಸವರಾಜ್ ನ ಬಗ್ಗೆ ಆದರ್ಶ ವಿದ್ಯಾ ಸಮಿಸಿ ಮಂಡಳಿಯು ಬೆಚ್ಚಿಬಿದಿದೆ.

ಆಡಳಿತ ಮಂಡಳಿಯನ್ನು ವಿಚಾರಣೆ ಮಾಡಿದಾಗ ನಮಗೆ ಎನ್ನು ಗೊತ್ತಿಲ್ಲ ಇಬ್ಬರನ್ನು ವಿಚಾರಿಸಿ, ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೆವೆ ಅಂತಾ ಉತ್ತರಿಸುತ್ತಾರೆ. ವಿದ್ಯೆಯನ್ನು ನೀಡಬೇಕಾದ ದೇಗುಲದಲ್ಲಿಯೇ ರಾಜ್ಯಾರೋಷವಾಗಿ ಈ ರೀತಿ ನಡೆಯುತ್ತಿರುವುದು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ.

Comments are closed.