ಕ್ರೀಡೆ

ವಿಶ್ವಕಪ್ ಟೂರ್ನಿಯ ಗುಣಮಟ್ಟ ಪ್ರಶ್ನಿಸಿದ ಪಾಕ್ ನ ಶೋಯಬ್ ಅಖ್ತರ್!

Pinterest LinkedIn Tumblr


ನವದೆಹಲಿ: ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್‌ ಟೂರ್ನಿಯಲ್ಲಿನ “ಗುಣಮಟ್ಟದ ಕ್ರಿಕೆಟ್‌” ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಕ್ತರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ, ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್‌ ಈಗಾಗಲೇ ಟೂರ್ನಿಯ ಸೆಮಿಫೈನಲ್‌ಗೆ ತಲುಪಿವೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು ನ್ಯೂಜಿಲೆಂಡ್‌ ಕೂಡ ಬಹುತೇಕ ನಾಕೌಟ್‌ ಪ್ರವೇಶ ಮಾಡಿದಂತಾಗಿದೆ.

ಆದರೆ ಈ ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಪ್ರಸ್ತುತ ವಿಶ್ವಕಪ್ ನಲ್ಲಿ ಗುಣಮಟ್ಟದ ಕ್ರಿಕೆಟ್ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

Comments are closed.