ಕರ್ನಾಟಕ

ಅನೈತಿಕ ಸಂಬಂಧ- ಅಮ್ಮನ ಅಣ್ಣನ ಮಗನನ್ನೇ ಕೊಂದ?

Pinterest LinkedIn Tumblr


ತಾಯಿಯ ಸ್ವಂತ ಅಣ್ಣನ ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ.

ಲಿಲಿತಾ ಎಂಬುವವರ ಅಣ್ಣನ ಮಗ ನಾರಾಯಣ. ಲಿಲಿತಾಗೆ ಗಂಡ ಇಲ್ಲ. ಮಗ 25 ವರ್ಷದ ರಾಜೇಶ್ ಗುಜರಾತ್ ಪೋರಬಂದರಿನಲ್ಲಿ ಮೀನಿನ ಕೆಲಸ ಮಾಡಿಕೊಂಡಿದ್ದ. ಇನ್ನು ಲಲಿತಾ ಮತ್ತು ನಾರಾಯಣ ಒಂದೇ ಮನೆಯಲ್ಲಿ ವಾಸವಿದ್ದರು. ಇವರ ನಡುವೆ ಅನೈತಿಕ ಸಂಬಂಧ ಇದೆ ಅಂತಾ ಗ್ರಾಮಸ್ಥರಲ್ಲಿ ಗುಸು ಗುಸು ಪಿಸುಪಿಸು ಇತ್ತು. ಇದು ರಾಜೇಶ್ ನಿಗೂ ಕೂಡ ಗೊತ್ತಾಗಿತ್ತು. ಕಳೆದ ಒಂದು ವಾರದ ಹಿಂದೆ ಊರಿಗೆ ಬಂದಿದ್ದ ರಾಜೇಶ ಅನೈತಿಕ ಸಂಬಂಧಗ ಗುಸು ಗುಸು ಪಿಸು ಪಿಸುವನ್ನು ಕೇಳಿ ಆಕ್ರೋಶಗೊಂಡಿದ್ದ. ನಾರಾಯಣನನ್ನು ಮನೆಯಿಂದ ಓಡಿಸಬೇಕು ಅಂತಾ ನಿರ್ಧರಿಸಿದ್ದ. ಅದ್ರಂತೆ ತನ್ನ ತಾಯಿಗೆ ನಾರಾಯಣನನ್ನು ಮನೆಯಿಂದ ಹೊರಗೆ ಕಳುಹಿಸು ಅಂತಾ ತಾಕೀತು ಮಾಡಿದ್ದ. ತಾಯಿ ಕಾರಣ ಕೇಳಿದ್ದಾರೆ. ಜೊತೆಗೆ ನಾರಾಯಣ ಕೂಡ ಯಾಕೆ ಹೋಗಬೇಕು ಅಂತಾ ಕೇಳಿದ್ದಾನೆ. ತಾನು ಮದುವೆ ಆಗಬೇಕು. ಮನೆಗೆ ಹೆಂಡತಿ ಬಂದಾಗ ನೀನು ಮನೆಯಲ್ಲಿ ಇರವುದ ಸರಿಯಲ್ಲಿ ಅಂತಾ ರಾಜೇಶ ಹೇಳಿದ್ದಾನೆ.

ಇದಕ್ಕೆ ತಾಯಿ ಲಿಲಿತಾ ಒಪ್ಪಲಿಲ್ಲ. ಇದರಿಂದ ನಿನ್ನೆ ರಾತ್ರಿ ರಾಜೇಶ್ ಕಂಠಪೂರ್ತಿ ಮದ್ಯಪಾನ ಮಾಡಿದ್ದಾನೆ. ಫುಲ್ ಟೈಟಾಗೆ ಮನೆಗೆ ಬಂದು ಮನೆಯಲ್ಲಿದ್ದ ತಾಯಿ ಲಲಿತಾಳಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಇದ್ರಿಂದ ಲಲಿತಾ ಪಕ್ಕದ ಮನೆ ಸೇರಿಕೊಂಡಿದ್ದಾರೆ. ಇದೇ ವೇಳೆಗೆ ನಾರಾಯಣ ಮನೆಗೆ ಆಗಮಿಸಿದ್ದಾನೆ. ಮಚ್ಚು ಹಿಡಿದು ವ್ಯಾರ್ಘನಾಗಿದ್ದ ರಾಜೇಶ ನಾರಾಯಣನ ಮೇಲೆ ಅಟ್ಯಾಕ್ ಮಾಡಿ ಕೊಚ್ಚಿ ಕೊಚ್ಚಿ ಕೊಂದಿದ್ದಾನೆ. ಇನ್ನು ಆಗಾಗ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಆದರೆ ಕೊಲೆ ಯಾಕೆ ಆಯ್ತು ಅನ್ನೊದು ಗೊತ್ತಿಲ್ಲಾ ಅಂತಾರೆ ಸ್ಥಳೀಯರು.

ಮೂಲತಹ ಹಾಸನ ಜಿಲ್ಲೆ ಸಕಲೇಶಪುರದವರಾದ ಈ ಕುಟುಂಬ ಮಂಗಳೂರಿನಲ್ಲಿ ಬಂದು ನೆಲೆಸಿತ್ತು. ಆದ್ರೆ ಇವರ ಮದ್ಯೆ ಈ ರೀತಿಯ ಅನುಮಾನ ಬಂದು ರಾಜೇಶ ತನ್ನ ಕೋಪದ ಕೈಗೆ ಬುದ್ದಿಕೊಟ್ಟು ತನ್ನ ಸ್ವಂತ ತಾಯಿಯ ಅಣ್ಣನ ಮಗನನ್ನೆ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ, ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾರಾಯಣನ ಕೈಗೆ ಅದೇ ಕತ್ತಿಯನ್ನು ಇಟ್ಟು ನಾಟಕವಾಡಿದ್ದಾನೆ. ಎಲ್ಲರನ್ನು ಕೂಗಿ ಕರೆದಿದ್ದಾನೆ. ತಾಯಿಯನ್ನು ಕರೆದು ನಾರಾಯಣ ತಾನೇ ಕಡಿಕೊಂಡು ಸತ್ತಿದ್ದಾನೆ ಅಂತಾ ನಾಟಕವಾಡಿದ್ದಾನೆ. ಆದರೆ ಇವರ ವಿಚಾರ ಸ್ಥಳೀಯರಿಗೆ ಮತ್ತು ತಾಯಿ ಲಲಿತಾಗೆ ಗೊತ್ತಿದ್ರಿಂದ ಉಳ್ಳಾಲ ಪೊಲೀಸರಿಗೆ ಕರೆ ಮಾಡಿ ರಾಜೇಶನನ್ನು ಹಿಡಿದುಕೊಟ್ಟಿದ್ದಾರೆ.

ಸದ್ಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿ ತನಿಖೆ ಆರಂಭಿಸಿದ್ದಾರೆ. ಇನ್ನು ಘಟನ ಸ್ಥಳದಿಂದಲೇ ರಾಜೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ರಾಜೇಶ್ ತಾಯಿ ಲಲಿತಾಳನ್ನು ಕೂಡ ಪೊಲೀಸು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಕೊಲೆಗೆ ನಿಜವಾದ ಕಾರಣ ಏನು ಅನ್ನೊದು ತಿಳಿದು ಬರಬೇಕಿದೆ. ಅದೇನೆ ಇದ್ದರು ಪೊಲೀಸ್ ಠಾಣೆ ಮೆಟ್ಟಿಲೇರಿ ಬಗೆಹರಿಸಿಕೊಳ್ಳಬಹುದಿದ್ದ ಸಮಸ್ಯೆಯನ್ನು ಕೊಲೆಯಲ್ಲಿ ಅಂತ್ಯವಾಗಿಸಿದ್ದು ವಿಪರ್ಯಾಸವೇ ಸರಿ.

Comments are closed.