ತೆರೆಮೇಲೆ ನ್ಯಾಯನೀತಿ ಧರ್ಮ ಎಂದೆಲ್ಲ ಡೈಲಾಗ್ ಹೊಡೆಯುವ ನಟರು ನಿಜಜೀವನದಲ್ಲಿ ದೇಶದ ಕಾನೂನಿಗೆ ಬೆಲೆ ನೀಡೋದಿಲ್ಲ ಎನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಹೌದು ಕನ್ನಡದ ಸ್ಯಾಂಡಲ್ ವುಡ್ ಖ್ಯಾತ ನಟರು ಹಾಗೂ ನಿರ್ಮಾಪಕರು ಕೋಟಿ ಕೋಟಿ ತೆರಿಗೆ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದ್ದು, ಸಧ್ಯದಲ್ಲೇ ನಟ-ನಿರ್ಮಾಪಕರಿಗೆ ನೊಟೀಸ್ ಜಾರಿಯಾಗಲಿದೆ.
ಶೀಘ್ರದಲ್ಲೆ ಆದಾಯ ತೆರಿಗೆ ಇಲಾಖೆ, ಕೇಂದ್ರ ಅಸೆಸ್ ಮೆಂಟ್ ವಿಭಾಗಕ್ಕೆ ಈ ಕುರಿತು ವರದಿ ನೀಡಲಿದ್ದು ಶೀಘ್ರವೇ ತೆರಿಗೆ ವಂಚಿಸಿರುವ ನಟರು ಹಾಗೂ ನಿರ್ಮಾಪಕರಿಗೆ ನೋಟೀಸ್ ಜಾರಿಯಾಗಲಿದೆ.ಇದೆ ವರ್ಷ ಜನವರಿ೩ ರಂದು ಆದಾಯ ತೆರಿಗೆ ಇಲಾಖೆ ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕರುಗಳಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿತ್ತು.
ಮೂರು ದಿನಗಳಿಗೂ ಅಧಿಕ ಕಾಲ ನಡೆದ ದಾಳಿಯಲ್ಲಿ ಅಪಾರ ಪ್ರಮಾಣದ ಚಿರಾಸ್ತಿ ಹಾಗೂ ಸ್ತಿರಾಸ್ತಿಗಳ ಮಾಹಿತಿಯನ್ನ ಐಟಿ ಕಲೆ ಹಾಕಿತ್ತು ನಂತರ ಎಲ್ಲರನ್ನೂ ಕರೆಸಿ ಅವರಿಂದ ಮಾಹಿತಿ ಪಡೆದುಕೊಂಡಿತ್ತು.
ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಸ್ತಿ ವಿವರಗಳ ಪರಿಶೀಲನೆಯನ್ನ ಬಹುತೇಕ ಅಂತ್ಯಗೊಳಿಸಿದ್ದು ಆರು ಜನರಿಂದ ಸುಮಾರು ೧೫೦ ಕೋಟಿಯಷ್ಟು ಆದಾಯ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು ಶೀಘ್ರದಲ್ಲೆ ಆದಾಯ ತೆರಿಗೆ ಇಲಾಖೆಯ ಕೇಂದ್ರ ಲೆಕ್ಕ ವಿಭಾಗ( ಅಸೆಸ್ ಮೆಂಟ್ ) ವಿಭಾಗಕ್ಕೆ ಐಟಿ ವರದಿ ಸಲ್ಲಿಸಲಿದೆ. ಹೀಗಾಗಿ ವರದಿ ಸಲ್ಲಿಕೆಯಾದ ಕೂಡಲೆ ಎಲ್ಲರಿಗೂ ನೋಟೀಸ್ ಜಾರಿಯಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳು ಬಿಟಿವಿಗೆ ಸ್ಪಷ್ಟಪಡಿಸಿವೆ.
Comments are closed.