ಕರಾವಳಿ

ದೈವಜ್ಞ ಬ್ರಾಹ್ಮಣರ ಸಂಘದಿಂದ “ಗಾಯತ್ರಿ ಜಪಯಜ್ಞ – ಮಹಾಯಾಗ ಮತ್ತು “ದೈವಜ್ಞ ದರ್ಶನ” ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ಜೂನ್.16 : ದೈವಜ್ಞ ಬ್ರಾಹ್ಮಣರ ಸಂಘ ( ರಿ) ಇವರ ಆಶ್ರಯದಲ್ಲಿ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ, ಹೊನ್ನವರ ಇವರ ದಿವ್ಯ ಸಾನಿಧ್ಯದಲ್ಲಿ “ಗಾಯತ್ರಿ ಜಪಯಜ್ಞ – ಮಹಾಯಾಗ ಮತ್ತು “ದೈವಜ್ಞ ದರ್ಶನ” ಕಾರ್ಯಕ್ರಮ ರವಿವಾರ ಬೆಳಗ್ಗೆ ಅಶೋಕನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಕೆ.ಸುಧಾಕರ್ ಶೇಟ್ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧೀಕ್ಷಕರು ಹಾಗೂ ವಿಶ್ವಹಿಂದೂ ಪರಿಷತ್ ಮಣ್ಣಗುಡ್ಡ ಪ್ರಖಂಡದ ಗೌರವಾಧ್ಯಕ್ಷ, ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಮೊಕ್ತೇಸರರು ಆಗಿರುವ ಕೆ.ಎಸ್.ನಾಗರಾಜ ಶೇಟ್, ಉದ್ಯಮಿ ರಾಜೇಂದ್ರ ಎಸ್.ರೇವಣ್‌ಕರ್ ಮುಖ್ಯ ಅಥಿತಿಗಳಾಗಿದ್ದರು.

ದೈವಜ್ಞ ಯುವಕ ಮಂಡಳಿ ಅಧ್ಯಕ್ಷ ಎ.ಗಣೇಶ್ ಶೇಟ್, ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಪುಷ್ಫಾ ಕೃಷ್ಣಾನಂದ ಶೇಟ್, ದೈವಜ್ಞ ಚಿನ್ನ,ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀಪಾದ ಬಿ.ರಾಯ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಸಮಾಜದ ವತಿಯಿಂದ ಸ್ವಾಮೀಜಿಯವರಿಗೆ ಪಾದುಕಾ ಪೂಜೆ ನಡೆಯಿತು. ಈ ಸಂದರ್ಭ ಅಥಿತಿಗಳು ಸ್ವಾಮೀಜಿಯವರನ್ನು ಶಾಲುಹೊದಿಸಿ, ಗೌರವಿಸಿ ಸ್ವಾಮೀಜಿಯವರಿಗೆ ಫಲಪುಷ್ಪ ಅರ್ಪಣೆ ಮಾಡಿದರು.

ದೈವಜ್ಞ ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಎಸ್.ವಿಜಯಕಾಂತ್ ಶೇಟ್ ಪ್ರಸ್ತಾವನೆಗೈದರು. ರಾಜೇಂದ್ರಕಾಂತ್ ಶೇಟ್ ಸ್ವಾಗತಿಸಿದರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್ (Mob: 9035089084)

Comments are closed.