ಉಡುಪಿ: ಮಲ್ಪೆಯಲ್ಲಿ ಫರಂಗಿಪೇಟೆ ಗ್ರಾ.ಪಂ ಸದಸ್ಯ ರಿಯಾಜ್(32) ಎಂಬುವವರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಮುಸುಕುದಾರಿ ದುಷ್ಕರ್ಮಿಗಳ ತಂಡವು ಈ ದುಕೃತ್ಯ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡಿರುವ ರಿಯಾಜ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಿನ ವಾಹನದಲ್ಲಿ ಮಲ್ಪೆ ಬಮ್ದರಿಗೆ ಮಂಗಳೂರಿನಿಂದ ಆಗಮಿಸಿದ್ದ ರಿಯಾಜ್ ವಾಹನವನ್ನು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿ ಬಂದು ರಿಯಾಝ್ ಒಬ್ಬರೆ ಕಾರಿನಲ್ಲಿ ಮಲಗಿದ್ದಾಗ ಈ ಕೃತ್ಯ ನಡೆಸಿದ್ದಾರೆನ್ನಲಾಗಿದ್ದು ಎಲ್ಲರೂ ಮುಖ ಕಾಣಿಸದಂತೆ ಮುಸುಕು ಹಾಕಿದ್ದರು.
ದುಷ್ಕರ್ಮಿಗಳ ಹಠಾತ್ ದಾಳಿಯಿಂದ ರಿಯಾಝ್ ಅವರ ಕೈ ಬೆರಳೊಂದು ತುಂಡಾಗಿದ್ದು ಕುತ್ತಿಗೆಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.