ಕರಾವಳಿ

ಪಠ್ಯ ಪುಸ್ತಕದಲ್ಲಿನ ಮುಖಬೆಲೆ ಗೊಂದಲ ನಿವಾರಿಸುವಂತೆ ಕ್ಯಾ.ಕಾರ್ಣಿಕ್ ಆಗ್ರಹ

Pinterest LinkedIn Tumblr

ಮಂಗಳೂರು : ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾದ ಪಠ್ಯ ಪುಸ್ತಕದಲ್ಲಿ ನಮೋದಿಸಲಾದ ಮುಖಬೆಲೆ ಹಾಗೂ ಕರ್ನಾಟಕ ಪಠ್ಯ ಪುಸ್ತಕ ಸಂಘದವರು ಶಾಲೆಗಳಿಂದ ಸಂಗ್ರಹಿಸಿರುವ ಬೆಲೆಗೂ ಸಾಕಷ್ಟು ವ್ಯತ್ಯಾಸವಿದ್ದು ಈ ಕೂಡಲೆ ಈ ಗೊಂದಲವನ್ನು ಪರಿಹರಿಸಬೇಕಾಗಿ ಶಿಕ್ಷಣ ಇಲಾಖೆಯನ್ನು ಆಗ್ರಹಿಸುವುದಾಗಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಕರ್ನಾಟಕ ಪಠ್ಯ ಪುಸ್ತಕ ಸಂಘವು ತಾವು ವಿತರಿಸಿದ ಪುಸ್ತಕದ ಮುಖ ಬೆಲೆಗಿಂತ ಅಧಿಕ ಮೊತ್ತವನ್ನು ಅನುದಾನ ರಹಿತ ಶಾಲೆಗಳಿಂದ ಸಂಗ್ರಹಿಸಿದ್ದು ವಿನ: ಕಾರಣ ಶಾಲೆಗಳನ್ನು ಪೂಷಕರು ಸಂಶಯ ದೃಷ್ಠಿಯಿಂದ ನೊಡುವಂತಾಗಿದೆ. ಅದುದರಿಂದ ಕರ್ನಾಟಕ ಪಠ್ಯ ಪುಸ್ತಕ ಸಂಘವು ಸಂಗ್ರಹಿಸದ ಅಧಿಕ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರು ಪಾವತಿಸಬೇಕು ಹಾಗೂ ಪುಸ್ತಕದಲ್ಲಿ ನಮೋದಿಸಲಾದ ಮುಖಬೆಲೆಯ ಮೊತ್ತವನ್ನು ಮಾತ್ರವೇ ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕು. ಶಾಲೆಗಳು ಆರಂಭಗೊಳ್ಳುವ ಸಂದರ್ಭದಲ್ಲಿ ಇಲಾಖೆಯು ಈ ರೀತಿಯ ಅನವಶ್ಯಕ ಗೊಂದಲಗಳಿಗೆ ಅವಕಾಶ ನೀಡ ಬಾರದು ಎಂದು ಕ್ಯಾ.ಕಾರ್ಣಿಕ್ ಆಗ್ರಹಿಸಿದ್ದಾರೆ.

Comments are closed.