
ಮಂಗಳೂರು. ಜೂನ್.೦೧ : ಲೋಕಸಭಾ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಭಾರೀ ಅಂತರದೊಂದಿಗೆ ಭರ್ಜರಿ ಜಯ ಗಳಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರ ಸಂಭ್ರಮದ ವಿಜಯೋತ್ಸವ ಮೆರವಣಿಗೆಯು ಮಂಗಳೂರು ನಗರದಲ್ಲಿ ಶನಿವಾರ ನಡೆಯಿತು.

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶನಿವಾರ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ ಮಿಜಾರ್, ನಿತಿನ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಸುದರ್ಶನ ಮೂಡುಬಿದಿರೆ, ಪ್ರೇಮಾನಂದ ಶೆಟ್ಟಿ, ರಾಜೇಶ್ ಹಾಗೂ ಪಕ್ಷದ ಪದಾಧಿಕಾರಿಗಳು, ಹಾಗೂ ಸಾವಿರಾರು ರಾರ್ಯಕರ್ತರು ಪಾಲ್ಗೊಂಡಿದ್ದರು.
ಸಂಸದ ನಳಿನ್ ಮತ್ತು ಬಿಜೆಪಿ ಮುಖಂಡರು ತೆರೆದ ವಾಹನದಲ್ಲಿ ಸಾಗಿದರು. ಕೆಲವೆಡೆ ಸಂಸದರು ರಸ್ತೆಯಲ್ಲಿ ಕಾರ್ಯಕರ್ತರ ಜತೆಗೂಡಿ ಹೆಜ್ಜೆ ಹಾಕಿದರು. ಹಿರಿಯ ಕಾರ್ಯಕರ್ತರಿಗೆ ನಮಿಸಿದರು. ಮೆರವಣಿಗೆ ಸಾಗಿಬಂದ ಹಾದಿಯುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಖುಷಿಪಟ್ಟರು. ಮೆರವಣಿಗೆಯಲ್ಲಿ ಮೋದಿ ವೇಷಧಾರಿಗಳು ಗಮನ ಸೆಳೆದರು.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಅಭೂತಪೂರ್ವ ಜಯಸಾಧಿಸಿದ ಸಂಭ್ರಮಾಚರಣೆಯ ವಿಜಯೋತ್ಸವ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಸನ್ಮಾನ್ಯ ನರೇಂದ್ರ ದಾಮೋದರದಾಸ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿರುವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಈ ವಿಜಯೋತ್ಸವದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮೆರವಣಿಗೆಯು ಶನಿವಾರ ಸಂಜೆ 05:00 ಗಂಟೆಗೆ ಕುದ್ಮಲ್ ರಂಗರಾವ್ ಪುರಭವನದಿಂದ ಪ್ರಾರಂಭಗೊಂಡು ಕ್ಲಾಕ್ ಟವರ್,ಗಣಪತಿ ಹೈಸ್ಕೂಲ್ ರಸ್ತೆ,ರಥಬೀದಿ,ನ್ಯೂಚಿತ್ರ ಚಿತ್ರಮಂದಿರ,ಗೋಕರ್ಣನಾಥ ಕ್ಷೇತ್ರ ರಸ್ತೆ, ಅಳಕೆ,ಮಣ್ಣಗುಡ್ಡೆ, ದುರ್ಗಾ ಮಹಲ್,ಬಲ್ಲಾಳ್ ಭಾಗ್,ಎಂ.ಜಿ ರಸ್ತೆ,ಬೆಸೆಂಟ್ ಕಾಲೇಜು ಮೂಲಕ ಸಾಗಿ ಪಿ.ವಿ.ಎಸ್ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಮಾಪ್ತಿಗೊಂಡಿತ್ತು.
Comments are closed.