
ಮೈಸೂರು: ಜೆಡಿಎಸ್ ನಾಯಕರಿಗೆ ಹಣ ಬಲವೇ ಮುಖ್ಯ, ನಾನು ರಾಜ್ಯಾಧ್ಯಕ್ಷನಾಗಿ ಶಿಫಾರಸ್ಸು ಮಾಡಿದ ಒಬ್ಬರಿಗೂ ಟಿಕೆಟ್ ಕೊಡಲಿಲ್ಲ. ನಮ್ಮ ದುರಂಕಾರಕ್ಕೆ ಸೋಲಾಗಿದೆ ಎಂದು ಜೆಡಿಎಸ್ ವಿರುದ್ಧವೇ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಆಕ್ರೋಶ ಹೊರಹಾಕಿದರು.
ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡಿ
ಮೈಸೂರು ಕೆ.ಆರ್. ನಗರ ಪುರಸಭೆ ಸೋಲಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆ.ಆರ್. ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ.
ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಟಿಕೆಟ್ ನೀಡದೆ ದುರಾಂಕರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡಿ ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ ವಿರುದ್ಧ ವಿಶ್ವನಾಥ್ ಅಸಮಾಧಾನ ಹೊರಹಾಕಿದರು.
ದುಡ್ಡೇ ಇಲ್ಲದೆ ಬೀದಿಯಲ್ಲಿ ಸ್ನಾನ ಮಾಡಿದವರು ಎಂಪಿಯಾಗಿದ್ದಾರೆ ಪ್ರತಾಪ್ ಚಂದ್ರ ಸಾರಂಗಿ, ಜನರನ್ನು ದುಡ್ಡಿನಿಂದ ಅಳೆಯಬೇಡಿ. ದುಡ್ಡಿನಿಂದ ಏನು ಆಗಲ್ಲ, ಅದು ಕೇವಲ ತಾತ್ಕಾಲಿಕ. ದುಡ್ಡೇ ಇಲ್ಲದೆ ಬೀದಿಯಲ್ಲಿ ಸ್ನಾನ ಮಾಡಿದವರು ಎಂಪಿಯಾಗಿದ್ದಾರೆ ಎಂದು ಪ್ರತಾಪ್ ಚಂದ್ರ ಸಾರಂಗಿ ಅವರನ್ನು ವಿಶ್ವನಾಥ್ ಉದಾಹರಣೆಯಾಗಿ ನೀಡಿದರು. ದುಡ್ಡು ಏನು ಮಾಡಲು ಆಗಲ್ಲ. ದುಡ್ಡು ಬೇಕು ಆದರೆ ದುಡ್ಡಿಂದಲೇ ಎಲ್ಲ ಅನ್ನೋ ದುರಹಾಂಕರ ಒಳ್ಳೆದಲ್ಲ ಎಂದು ಸಚಿವ ಸಾ.ರಾ.ಮಹೇಶ್ ಗೆ ಕಿವಿಮಾತು ಹೇಳಿದರು.
Comments are closed.