ಮಂಗಳೂರು : ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರದ ಸಂಪುಟಕ್ಕೆ ಕೇಂದ್ರ ಸಚಿವರಾಗಿ ಸೇರ್ಪಡೆಗೊಂಡಿರುವ ಶ್ರೀ ಡಿ.ವಿ ಸದಾನಂದ ಗೌಡ, ಶ್ರೀ ಪ್ರಹ್ಲಾದ್ ಜೋಷಿ, ಶ್ರೀ ಸುರೇಶ್ ಅಂಗಡಿ ಹಾಗೂ ಶ್ರೀ ವಿ. ಮುರಳೀಧರನ್ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ದೆಹಲಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಈ ವೇಳೆ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಮತ್ತಿತ್ತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.