ಕರಾವಳಿ

ಅಮೃತ ಸಮಾನವಾದ ಕೊಲ್ಲೂರಿನ ಪವಿತ್ರ ಸೌಪರ್ಣಿಕಾ ನದಿಯಲ್ಲಿ ಜಲಚರಗಳ ಮಾರಣಹೋಮ..!

Pinterest LinkedIn Tumblr

ಕುಂದಾಪುರ: ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕಿಂತ ಹಿಂದೆ, ಸೌಪರ್ಣಿಕಾ ನದಿ ಹರಿವಿತ್ತು! ಋಷಿ-ಮುನಿಗಳು ಕೂತ ತಪಸ್ಸು ಮಾಡಿದ, ಉತ್ತರಕ್ಕೆ ಹರಿವ ಅಗ್ನಿತೀರ್ಥ ಕಾಶಿ ತೀರ್ಥವಲ್ಲದೆ ಔಷಧೀಯ ಗುಣಗಳ 64 ತೀರ್ಥಗಳ ಸಮುಚ್ಛಯ ಸೌಪರ್ಣಿಕಾ ನದಿ ನೀರು ಅಮೃತವಾಗಿದ್ದು, ಮಾಲೀನ್ಯ, ಹರಿವು ನಿಲ್ಲಿಸಿರುವುದೇ ವಿಷ ಆಗುತ್ತಿದೆಯಾ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇದಕ್ಕೆ ಸಾಕ್ಷಿಯಾಗುವಂತೆ ನದಿಯಲ್ಲಿ ಮೀನುಗಳು ಸತ್ತು ತೇಲುತ್ತಿದ್ದರೆ, ಹಾವು ಜಲಚರಗಳ ಮಾರಣಹೋಮ ನೀರು ವಿಷವಾಗುತ್ತಿರುವ ಮುನ್ಸೂಚನೆ ನೀಡುತ್ತಿದೆ. ನೀರು ಹರಿವುದ ನಿಲ್ಲಿಸಿ, ಅಲ್ಲಲ್ಲಿ ಹೊಂಡದಲ್ಲಿ ನಿಂತ ನೀರು ಬಿಸಿಯಾಗುವುದು, ರಾಸಾಯನಿಕ ಯಕ್ತ ವಸತಿ ಗೃಹಗಳ ಬಟ್ಟೆ ತೊಳೆಯುವುದು, ಅನ್ನದಾಸೋಹದ ಕುದಿ ಅನ್ನದ ತೆಳಿ ನದಿಗೆ ಬೀಡುವದಲ್ಲದೆ, ಕೊಲ್ಲೂರು ಸಮಸ್ತ ಪಾಪಕೂಪಗಳ ನದಿಗೆ ಹರಿಸುವ ಮೂಲಕ ನೀರು ವಿಷವಾಗುತ್ತಿದೆ. ಜಲಚರಗಳು ಪ್ರಾಣತ್ಯಾಗಕ್ಕೂ ದಾರಿ ಮಾಡಿಕೊಡುತ್ತದೆ ಎನ್ನೋದು ಸತ್ಯ ಸಂಗತಿ.

ವಸತಿ ಸಮುಚ್ಛಯಗಳ ಬಟ್ಟೆ, ಬೆಡ್ ಶೀಟ್ ತೊಳೆಯುವುದಕ್ಕೂ ಸೌಪರ್ಣಿಕಾ ನದಿ ನೀರೇ ಬೇಕು. ಬಟ್ಟೆ ತೊಳೆಯಲು ಬಳಸುವ ರಾಸಾಯನಿಕವೇ ಜಲಚರ ಪ್ರಾಣಕ್ಕೆ ಕುತ್ತು ತರುತ್ತಿದೆ. ನೀರು ಹರಿಯದಿದ್ದರಿಂದ ಬಟ್ಟೆ ಬಳಸಿದ ರಾಸಾಯನಿಕ ಹೊಂಡದಲ್ಲಿ ನಿಂತು ಮೀನು ಸಾಯುತ್ತಿದ್ದರೆ, ಹಾವುಗಳು ಕೂಡಾ ಸಾಯುತ್ತಿವೆ. ಒಟ್ಟಾರೆ ದೇವಸ್ಥಾನದಿಂದ ಹಿಡಿದು, ಸ್ಥಳೀಯರಿಂದ ಮೊದಲ್ಗೊಂಡು, ಯಾತ್ರಾರ್ಥಿಗಳ ವರೆಗೆ ಸೌಪರ್ಣಿಕಾ ನದಿ ಪಾಲೀನ್ಯದ ಪಾಲುದಾರರು!

ಸೌಪರ್ಣಿಕಾ ನದಿಗೆ ಕೊಲ್ಲೂರಿನ ಎಲ್ಲಾ ತರಹದ ತ್ಯಾಜ್ಯಗಳು ಬಿಡಲಾಗುತ್ತದೆ. ಯಾವುದು ಪವಿತ್ರ ತೀರ್ಥ ಎಂದು ನಂಬಿ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರೋ ಅದೇ ಅಗ್ನಿತೀರ್ಥ, ಕಾಶಿ ತೀರ್ಥಕ್ಕೆ ತ್ಯಾಜ್ಯ ಹರಿಯ ಬಿಡಲಾಗುತ್ತದೆ. ತ್ಯಾಜ್ಯ ಬಿಡುವುದರಲ್ಲಿ ಸ್ಥಳೀಯರದ್ದು ಎಷ್ಟು ಪಾಲಿದೆಯೋ ಅಷ್ಟೇ ಪಾಲು ದೇವಸ್ಥಾನದ್ದೂ ಆಗಿದೆ. ಅನ್ನದಾಸೋಹ ಕೈತೊಳೆದ ನೀರು ಅಗ್ನಿತೀರ್ಥಕ್ಕೆ ಹೋಗುತ್ತದೆ. ಹಾಗೆ ದೇವಸ್ಥಾನದಲ್ಲಿ ನಡೆಯುವ ಮಹಾ‌ಅನ್ನ ಪ್ರಸಾದದ ಬಸಿದ ಅನ್ನದ ಬಿಸಿತಿಳಿ ಕೂಡಾ ನದಿಗೆ ಬಿಡುವ ಜತೆ ಭೋಜನ ಶಾಲೆ ಪಾತ್ರೆ ಪಗಡೆ ತೊಳೆದ ನೀರು ನದಿಗೆ ವಿಸರ್ಜನೆ. ವಸತಿ ಸಮುಚ್ಛಗಳು ತ್ಯಾಜ್ಯ ಶುದ್ಧೀಕರಿಸಿ ಬಿಡಬೇಕೆಂಬ ನಿಯಮವಿದ್ದರೂ ಪಾಲನೆ ಆಗುತ್ತಿಲ್ಲ. ಒಟ್ಟಾರೆ ಕೊಲ್ಲೂರು ಸೌಪರ್ಣಿಕಾ ನದಿ ಮಲೀನಕ್ಕೆ ಎಲ್ಲರ ಪಾಲೂ ಇದೆ. ಜಿಲ್ಲೆಯಲ್ಲಿ ಪರಿಸರ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದಾರಾ? ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಏನು ಮಾಡುತ್ತಿದೆ? ಕೊಲ್ಲೂರು ಸ್ಥಳೀಯರಿಗೆ ಶ್ರೀ ಮೂಕಾಂಬಿಕಾ ತಾಯಿ ಬಗ್ಗೆಯಾಗಲೀ ಪವಿತ್ರ ತೀರ್ಥದ ಬಗ್ಗೆಯಾಗಲೀ ಭಯಭಕ್ತಿಯೇ ಇಲ್ಲಾ..!

ವಿಷ ಪೂರಿತವಾದ ವಸತಿ ಸಮುಚ್ಛಯ ಅಂಗಡಿ ಮುಂಗಟ್ಟು ನೀರು ಬಿಡುವ ಜತೆ ಅನ್ನ ಬಸಿದ ಬಿಸಿ ತಿಳಿ ಎಲ್ಲವೂ ಸೇರಿ ಸೌಪರ್ಣಿಕಾ ನದಿ ನೀರು ವಿಷವಾಗುತ್ತಿರುವುದೇ ಜಲಚರಗಳ ಮಾರಣಹೋಮಕ್ಕೆ ಕಾರಣ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಶ್ರೀ ಶಂಕರಾಚಾರ್ಯರು ಸ್ಥಾಪಿಸುವ ಮುನ್ನಾ ಉತ್ತರಕ್ಕೆ ಹರಿವ ಕಾಶಿ ಹಾಗೂ ಅಗ್ನಿತೀರ್ಥ ಇತ್ತು. ಈ ತೀರ್ಥಗಳು ಸೇರಿ ಸೌಪರ್ಣಿಕಾ ನದಿ ತೀಥವಷ್ಟೇ ಅಲ್ಲಾ ಅಮೃತಕ್ಕೆ ಸಮಾನವಾಗಿತ್ತು. ನದಿ ತಟದಲ್ಲಿ ದೇವರ ಸಂಚರಿಸಿದ್ದು, ಋಷಿಮುನಿಗಳು ಕೂತು ತಪಸ್ಸು ಮಾಡಿದ ಪವಿತ್ರ ಸೌಪರ್ಣಿಕಾ ನದಿ ಕುಲಷಿತವಾಗುತ್ತಿರುವುದು ಬೇಸರ ಸಂಗತಿ. ದೇವಿ ದರ್ಶನ ಕೊಡ್ತಾಳೋ ಬಿಡ್ತಾಳೋ ಅದು ಬೇರೆ ಆದರೆ ಭಕ್ತರಿಗೆ ಅಮೃತಸಮಾನ ಸೌಪರ್ಣಿಕಾ ನದಿ ನೀರಾದರೂ ಸಿಗಲಿ ಎಂದು ಹೋರಾಟ ಮಾಡುತ್ತಾ ಬಂದರೂ ಸ್ಪಂದನ ಇಲ್ಲದೆ ವ್ಯರ್ಥವಾಗುತ್ತಿದೆ. ಪರಿಸರ ಮಾಲೀನ್ಯ ಇಲಾಖೆಯಲ್ಲಿ ಮಾಲಿನ್ಯದ ಬಗ್ಗೆ ದೂರಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೊಲ್ಲೂರು ಮಾಲೀನ್ಯದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.
– ಹರೀಶ್ ತೋಳಾರ್, ಧಾರ್ಮಿಕ ಕಾರ್‍ಯಕರ್ತ, ಕೊಲ್ಲೂರು.

ನದಿ ಕಲುಷಿತಗೊಳ್ಳಲು ತಾಜ್ಯ ಬಿಡುವುದೇ ಪ್ರಮುಖ ಕಾರಣ. ನೀರನಲ್ಲಿ ಅಮ್ಲಜನಕರ ಕೊರತೆ, ನದಿ ಪಾತ್ರದ ಹೊಂಡದ ನೀರು ಬಿಸಿಯಾಗುತ್ತಿರುವುದು ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ನದಿಗೆ ಸಂಪೂರ್ಣ ಕಲಬೆರಿಕೆ ನೀರು ಸೇರಿ ವಿಷ ಆಹಾರವಾಗಿ ಮೀನುಗಳು ಸಾಯುತ್ತಿವೆ. ಇದೇ ನೀರನ್ನ ವನ್ಯಜೀವಿ, ಮಂಗ ಕುಡಿಯುತ್ತಿದ್ದು, ನಾಳೆ ಪ್ರಾಣಿಗಳು ಸತ್ತರೂ ಅಚ್ಚರಿಯಿಲ್ಲ. ಒಳಚರಂಡಿ ವ್ಯವಸ್ಥೆ ಕೊಲ್ಲೂರಿನಲ್ಲಿ ಇನ್ನೂ ಆಗಿರದೆ, ಪ್ರಸಕ್ತ ಒಳಚರಂಡಿ ಹಾಗೂ ವಸತಿ ಸಮುಚ್ಛಯಗಳ ತ್ಯಾಜ್ಯ ಸೌಪರ್ಣಿಕಾ ನದಿ ಮಾಲೀನ್ಯಕ್ಕೆ ಮೂಲ ಕಾರಣ. ಅಮೃತ ಸಮಾನ ಸೌಪರ್ಣಿಕಾ ನದಿ ಮಾಲೀನ್ಯ ನಿಜಕ್ಕೂ ಖೇದಕರ ಸಂಗತಿ.
-ಸಂದೀಪ್ ಕೊಲ್ಲೂರು, ಸದಸ್ಯ, ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್.

Comments are closed.