ಕರಾವಳಿ

ಖ್ಯಾತ ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್‌ರಿಗೆ “ಸಮಾಜ್‌ ರತ್ನ” ಪ್ರಶಸ್ತಿ

Pinterest LinkedIn Tumblr

ಮಂಗಳೂರು : ಜ್ಞಾನ ಮಂದಿರ‌ ಅಕಾಡೆಮಿ, ಬೆಂಗಳೂರು ಇದರ‌ ಆಶ್ರಯದಲ್ಲಿ ‌ಉಡುಪಿಯ ರಾಜಾಂಗಣ ಸಭಾ ಮಂಟಪದಲ್ಲಿ ನಡೆದ 8ನೇ ಅಖಿಲ ಭಾರತಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ‌ ಎಸ್.ಎಸ್. ನಾಯಕ್ (ಸಿ.ಎ. ) ರವರಿಗೆ ತಮ್ಮ 30 ವರ್ಷಗಳ ಸುಧೀರ್ಘ ಸೇವೆಗಾಗಿ ಸಮಾಜ್‌ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮ್ಮೇಳನದ ಅಧ್ಯಕ್ಷರಾದ ಶ್ರೀಮತಿ ಅಮಿತಜೆತಿನ್ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯಜನರಲ್ ಮ್ಯಾನೇಜರ್ ಶ್ರೀ ಬಾಸ್ಕರ್ ಹಂದೆ, ಶಾರದಾವಿದ್ಯಾಲಯದ‌ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್, ಅಕಾಡೆಮಿಯ‌ಅಧ್ಯಕ್ಷರಾದ ಹೆಚ್. ಜೆ. ಸೋಮಶೇಖರ್, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕರಾದ ಪಿ.ಸುರೇಶ ಶೆಣೈ ಮತ್ತಿತರಗಣ್ಯರು ಉಪಸ್ಥಿತರಿದ್ದರು.

Comments are closed.