ಮಂಗಳೂರು : ಕದ್ರಿ ಮಠಾಧೀಶಶ್ರೀ ಶ್ರೀರಾಜಾ ನಿರ್ಮಲನಾಥ್‌ಜೀ ಉಪಸ್ಥಿತಿಯಲ್ಲಿ ಮೇ 2ದ 10ರವರೆಗೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರಗಿದ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗದ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಇದರ ಯಶಸ್ವಿನಲ್ಲಿ ಸಹಭಾಗಿಗಳಾದವರೆಲ್ಲರಿಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದಾ ಎ. ಜೆ. ಶೆಟ್ಟಿಕೃತಜ್ಞತೆ ಸಲ್ಲಿಸಿರುವರು.
ಈ ಬೃಹತ್‌ಕಾರ್ಯದ ಪ್ರಧಾನಆಚಾರ್ಯತ್ವ ವಹಿಸಿದ ದೇರೆಬೈಲು ಬ್ರ| ಶ್ರೀ ವಿಠಲದಾಸತಂತ್ರಿ ಸಹಿತ ಅರ್ಚಕರಾದರಾಮಣ್ಣ ಅಡಿಗ , ಪ್ರಭಾಕರ ಅಡಿಗ ಅಲ್ಲದೆ ಪಾಲ್ಗೊಂಡ ಎಲ್ಲಾ ವೈದಿಕರನ್ನು ಅಭಿನಂದಿಸಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಧಾರ್ಮಿಕ ಸಮಿತಿಯ ಸಂಚಾಲಕ ವಿಠಲದಾಸತಂತ್ರಿ ಮತ್ತು ಸದಸ್ಯರು, ಆರ್ಥಿಕಸಮಿತಿಯಸದಸ್ಯರು, ಸ್ವಾಗತಸಮಿತಿಯ ಸಂಚಾಲಕ ಸುಂದರ ಶೆಟ್ಟಿ ಮತ್ತು ಸದಸ್ಯರು, ಅನ್ನ ಸಂತರ್ಪಣಾಸಮಿತಿಯ ಸಂಚಾಲಕ ದಿನೇಶ್‌ದೇವಾಡಿಗ ಮತ್ತುತಂಡ, ಹೊರೆಕಾಣಿಕೆ ಸಮಿತಿಯ ಸಂಚಾಲಕ ಗಣೇಶ್ ಶೆಟ್ಟಿ ಮತ್ತುತಂಡ, ಪ್ರಚಾರಸಮಿತಿಯ ಸಂಚಾಲಕ ಎಸ್. ಪ್ರದೀಪಕುಮಾರಕಲ್ಕೂರ ಮತ್ತು ತಂಡ, ಸಾಂಸ್ಕೃತಿಕಕಾರ್ಯಕ್ರಮ ಸಮಿತಿಯ ಸಂಚಾಲಕ ಕಿಶೋರ್ ಡಿ. ಶೆಟ್ಟಿ ಮತ್ತು ತಂಡ, ಪಾರ್ಕಿಂಗ್ ವ್ಯವಸ್ಥಾಸಮಿತಿಯ ಸಂಚಾಲಕ ಚಂದ್ರಹಾಸ್ ಮತ್ತು ತಂಡ, ನೀರು ಸರಬರಾಜು ಸಮಿತಿಯ ಸಂಚಾಲಕ ಅಶೋಕ್‌ಡಿ.ಕೆ. ಮತ್ತು ತಂಡ, ನೈರ್ಮಲ್ಯಸಮಿತಿಯ ಸಂಚಾಲಕ ಬಾಲಕೃಷ್ಣ ಕೊಟ್ಟಾರಿ ಮತ್ತು ತಂಡ, ಸ್ವಯಂ ಸೇವಕ ಸಮಿತಿಯ ಸಂಚಾಲಕರಾದ ನವನೀತ ಶೆಟ್ಟಿ ಕದ್ರಿ, ಪುರುಷೋತ್ತಮಕೊಟ್ಟಾರು ಮತ್ತು ತಂಡ ಹೀಗೆ ವಿವಿಧ ಸಮಿತಿಗಳ ಸಂಚಾಲಕರು ಮತ್ತು ಅವರ ತಂಡಗಳಿಗೆ, ದೇವಳದ ಸಿಬ್ಬಂದಿಗಳಿಗೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿ ಗಣ್ಯರುಗಳಿಗೆ ದಾನಿಗಳಿಗೆ, ಕಲಾವಿದರುಗಳಿಗೆ, ಸಾರ್ವಜನಿಕ ಅನ್ನ ಸಂತರ್ಪಣೆ ವ್ಯವಸ್ಥೆಗೊಳಿಸಿದ ಕಾರ್ಯಕರ್ತರಿಗೆ, ಶುಚಿತ್ವ ನೈರ್ಮಲ್ಯಕಾಪಾಡಿದ ಕಾರ್ಯಕರ್ತರುಗಳಿಗೆ, ಆಹೋರಾತ್ರಿ ದುಡಿದು ಸರ್ವರೀತಿಯಲ್ಲೂ ಸಹಕರಿಸಿದ ಭಕ್ತಾದಿಗಳಿಗೆ, ಕಾನೂನು ಸುವ್ಯವಸ್ಥೆ ಕಾಪಾಡಿದ ಆರಕ್ಷಕ ಅಧಿಕಾರಿಗಳು, ಸಿಬ್ಬಂದಿಗಳು, ಅಗ್ನಿಶಾಮಕದಳ, ಹೋಂಗಾರ್ಡ್ ಸಹಿತ ಎಲ್ಲರಿಗೂ ಕ್ಷೇತ್ರದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿರುವರು ಎಂದು ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರಕಲ್ಕೂರ ತಿಳಿಸಿದ್ದಾರೆ.
Comments are closed.