
ಮಂಗಳೂರು : ಶ್ರೀ ಕ್ಷೇತ್ರಕದ್ರಿಯಲ್ಲಿ ಮೇ 2ರಿಂದ 11ರವರೆಗೆ ಜರಗಲಿರುವ ಬ್ರಹ್ಮಕಲಶ ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕ ಶ್ರೀ ಶ್ರೀರಾಜಾ ನಿರ್ಮಲನಾಥ್ಜೀಕದ್ರಿ ಮಠಾಧೀಶರ ಉಪಸ್ಥಿತಿಯಲ್ಲಿ ಹಾಗೂ ದೇರೆಬೈಲು ಬ್ರ| ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಆರಂಭಗೊಂಡಿದೆ.
ಗುರುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಆಧ್ಯಗಣಯಾಗ, ಸಂಜೆ ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಷಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜರೋಹಣ, ಭೇರಿತಾಡನ, ಅಂಕುರಾರೋಹಣ, ಉತ್ಸವ ಬಲಿ, ಭೂತ ಬಲಿ ಜರಗಿತು.

ಧಾರ್ಮಿಕ ಸಭಾಕಾರ್ಯಕ್ರಮ :
ಕದ್ರಿಯೋಗೀಶ್ವರ ಮಠದ ಶ್ರೀ ನಿರ್ಮಲನಾಥ್ಜೀಗೌರವ ಉಪಸ್ಥಿತಿಯಲ್ಲಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು, ಕಟೀಲು ವಾಸುದೇವ ಆಸ್ರಣ್ಣ ಅವರು ದೀಪ ಪ್ರಜ್ವಲನೆ ನೆರವೇರಿಸಿ ದರು. ಬ್ರ| ಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಅತಿಥಿಗಳಾಗಿ ಎಸ್. ಡಿ. ಎಂ. ಎಜ್ಯುಕೇಶನ್ ಸೊಸೈಟಿ, ಉಜಿರೆಇದರ ಕಾರ್ಯದರ್ಶಿ ಶ್ರೀ ಹರ್ಷೇಂದ್ರಕುಮಾರ್ ಧರ್ಮಸ್ಥಳ, ಕರ್ಣಾಟಕ ಬ್ಯಾಂಕ್ನ್ಅಧ್ಯಕ್ಷರಾದ ಶ್ರೀ ಪಿ. ಜಯರಾಮ್ ಭಟ್, ಮುಂಬೈ ಉದ್ಯಮಿಕರ್ನಿರೆ ವಿಶ್ವನಾಥ ಶೆಟ್ಟಿ, ಕರಾವಳಿ ಕಾಲೇಜು ಅಧ್ಯಕ್ಷ ಎಸ್. ಗಣೇಶ್ರಾವ್, ಕುದ್ರೋಳಿ ಭಗವತಿಕ್ಷೇತ್ರದಅಧ್ಯಕ್ಷಗಣೇಶ್ಕುಂಟಲ್ಪಾಡಿ, ಉರ್ವ ಮಾರಿಗುಡಿಯಅಧ್ಯಕ್ಷ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ ಭಾಗವಹಿಸಿದ್ದರು.
ವಿವಿಧ ಸಾಧಕರಿಗೆ ಸನ್ಮಾನ :
ಕಾರ್ಯಕ್ರಮದಲ್ಲಿ ಸಾಧಕರಾದ ನಾಗೇಶ್ ಎ. ಬಪ್ಪನಾಡು (ನಾಗಸ್ವರ ವಾದಕರು), ದೂಮಪ್ಪ ಮೇಸ್ತ್ರಿ(ಕಂಟ್ರಾಕ್ಟದಾರರು) ವಸಂತಕದ್ರಿ (ಸಂಗೀತ), ಗೋವಿಂದ ಮೊಗ್ರಾಲ್ (ವಿಶೇಷ ಜಿಲ್ಲಾಧಿಕಾರಿ ಧಾರ್ಮಿಕ ದತ್ತಿ ಇಲಾಖೆ) ಮೊದಲಾದವರನ್ನು ಸನ್ಮಾನಿಸಲಾಯಿತು. ಪ್ರಚಾರ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಸ್ತಾವನೆಗೈದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾದಂಡರುದ್ರಾಭಿಷೇಕದ ಪ್ರಯುಕ್ತ ಗುರುವಾರ ಸಂಜೆ 4ರಿಂದ 5ರವರೆಗೆ ವಿದುಷಿ ಶಾಲಿನಿ ಆತ್ಮ ಭೂಷಣ್, ನೃತ್ಯೋಪಾಸನಕಲಾಕೇಂದ್ರ(ರಿ) ರವರಿಂದಭರತನಾಟ್ಯ ನಡೆಯಿತು.
ಸಂಜೆ 5ರಿಂದ 6ರವರೆಗೆ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಿಶಾರದ ಶ್ರೀ ನಾಗೇಶ್ ಬಪ್ಪನಾಡು ಇವರಿಂದ ನಾಗಸ್ವರ ಸಂಗೀತ ಕಚೇರಿ ಹಾಗೂ ರಾತ್ರಿ 8ರಿಂದ 11ರವರೆಗೆ ಶರತ್ಕುಮಾರ್ ಕದ್ರಿಯವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ “ಕದ್ರಿ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಜರಗಿತು.
Comments are closed.