ಕರಾವಳಿ

ಸುವರ್ಣ ಮೂಲಸ್ಥಾನ, ಚಿತ್ರಾಪುರ : ಶ್ರೀ ನಾಗದೇವರ ಹಾಗೂ ಧರ್ಮ ದೈವಗಳ ಪುನರ್ ಪ್ರತಿಷ್ಠೆ – ಬ್ರಹ್ಮ ಕಲಶೋತ್ಸವ

Pinterest LinkedIn Tumblr

ಮಂಗಳೂರು ಎಪ್ರಿಲ್.29: ಸುವರ್ಣ ಮೂಲಸ್ಥಾನದ ನೂತನ ರಾಜಗೋಪುರದ‌ ಉದ್ಫಾಟನೆ ಮತ್ತು ಪರಿವಾರ ದೇವತೆಗಳ ಸಹಿತ ಶ್ರೀ ನಾಗದೇವರ ಹಾಗೂ ಧರ್ಮ ದೈವಗಳ ಪುನರ್ ಪ್ರತಿಷ್ಠೆ – ಬ್ರಹ್ಮಕಲಶೊತ್ಸವವು ಚಿತ್ರಾಪುರ ಕುಳಾಯಿಯಲ್ಲಿ ಎ. 27ರಿಂದ 30ರವರೆಗೆ ದೇರೆಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ಮಾರ್ಗದರ್ಶನದಲ್ಲಿ ಆರಂಭಗೊಂಡಿದ್ದು, ಎ. 27ರಂದು ಪ್ರಾರ್ಥನೆ, ತೋರಣ ಮೂಹೂರ್ತ, ವಾಸ್ತು ಹೋಮ, ಬಿಂಬಾಧಿವಾಸ, ಎ. 28ರಂದು ಗಣಯಾಗ, ಶ್ರೀ ನಾಗ ದೇವರ ಹಾಗೂ ಬ್ರಹ್ಮರಕ್ತೇಶ್ವರೀ, ನಂದಿಗೋಣ, ಕ್ಷೇತ್ರಪಾಲ ದೇವರ ಪ್ರತಿಷ್ಠೆ ಜರಗಿತು.

ಎ. 29ರಂದು ಶ್ರೀ ಮಹಿಷಾಂದಾಯ, ಧೂಮಾವತಿ ಮತ್ತು ಬಂಟ, ಅಣ್ಣಪ್ಪ ಪಂಜುರ್ಲಿ ಪ್ರತಿಷ್ಟೆ, ಬ್ರಹ್ಮಕಲಶಾಭಿಷೇಕ, ಧೂಮಾವತಿ ದೈವದದರ್ಶನ ಸೇವೆ ಜರಗಿತು, ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸುವರ್ಣ ಮೂಲಸ್ಥಾನ, ಕುಳಾಯಿ ಇದರ ಅಧ್ಯಕ್ಷ ಮಾಧವ ಸುವರ್ಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಸುವರ್ಣ ಅಳಕೆ, ಮೂಲಸ್ಥಾನದ ಮೊಕ್ತೇಸರರು, ಅರ್ಚಕರು, ಪಧಾಧಿಕಾರಿಗಳು, ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

ಇಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ :

ಇಂದು ಸಂಜೆ ಭಕ್ತಿಗೀತೋತ್ಸವ, ರಸಸಂಜೆ, ( ಕಲಾವತಿ ಪುತ್ರನ್‌ಉಡುಪಿ ಮತ್ತು ಬಳಗದವರಿಂದ) ಸಂಜೆ 7ರಿಂದ ಶ್ರೀ ಕೃಷ್ಣ ರಂಗ ಮಂದಿರದಲ್ಲಿ ಮಾಧವ ಸುವರ್ಣರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಜರಗಲಿದೆ. ಶ್ರೀ ರುದ್ರಮುನಿ ಮಹಾಸ್ವಾಮಿ‌ ಅವರಿಂದ ಆರ್ಶೀವಚನ, ಬ್ರಹ್ಮ ಶ್ರೀ ವಿಠಲದಾಸತಂತ್ರಿ‌ಅವರಿಂದಧಾರ್ಮಿಕ ಪ್ರವಚನ, ಆನಂದ ಸಿ. ಕುಂದರ್‌ ಅವರಿಂದ ದೀಪಾರಾಧನೆ, ಅತಿಥಿಗಳು: ಯಶ್‌ಪಾಲ್ ಎ ಸುವರ್ಣ, ಅಜೀತ್ ಸುವರ್ಣ, ಪ್ರಸಾದ್‌ರಾಜ್‌ಕಾಂಚನ್, ಆನಂದ ಪಿ. ಸುವರ್ಣ, ಡಾ: ಕವಿತಾಡಿಸೋಜ, ಲೀಲಾಧರತಣ್ಣೀರುಬಾವಿ, ಶ್ರೀನಿವಾಸ ಸುವರ್ಣ, ಪುರಂದರ್‌ ಎನ್ ಸುವರ್ಣ, ಮಾಧವ ಸುವರ್ಣ ಅಳಕೆ ಭಾಗವಹಿಸಲಿರುವರು. ರಾತ್ರಿ 9ರಿಂದಧರ್ಮ ದೈವಗಳ ನೇಮೋತ್ಸವ ಜರಗಲಿದೆ.

ನಾಳೆ ವಾರ್ಷಿಕ ಅಗೇಲು ಸೇವೆ:

ಎ. 30ರಂದು ದೈವಗಳ ಹೋಮ ಪಂಚಕಚ್ಚಾಯ ( ವಾರ್ಷಿಕ ಅಗೇಲು ಸೇವೆ) ಪ್ರಸಾದ ವಿತರಣೆ ನಡೆಯಲಿದೆ ಎಂದು ಸುವರ್ಣ ಮೂಲಸ್ಥಾನ, ಕುಳಾಯಿ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಸುವರ್ಣ ಅಳಕೆ ಇವರು ತಿಳಿಸಿದ್ದಾರೆ.

Comments are closed.