ಅರಬ್ ಸಂಯುಕ್ತ ಸಂಸ್ಥಾನದ ಅಲ್ ಐನ್ ಕನ್ನಡ ಸಂಘದ 16ನೇ ವಾರ್ಷಿಕೋತ್ಸವ ಮತ್ತು “ಸೌಹಾರ್ದತೆಯ ಸಂಭ್ರಮ” 2019 ಅಲ್ ಐನ್ ರಾಡಿಸ್ಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ಏಪ್ರಿಲ್ 26ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00ಗಂಟೆಯವರೆಗೆ ನಡೆಯಿತು.
ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಸುಮಂಗಲೆಯರು ಪೂರ್ಣ ಕುಂಭ ಕಲಶದೊಂದಿಗೆ ಮಹಾಧ್ವಾರದಿಂದ ಸಭಾಂಗಣಕ್ಕೆ ಬರಮಾಡಿಕೊಂಡರು.
ಪವಿತ್ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ ಇತ್ತಿಚೆಗೆ ಭಾರತದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಹಾನ್ ಯೋದರಿಗೆ ಗೌರವ ಶೃದ್ಧಾಂಜಲಿ ಸಲ್ಲಿಸಲಾಯಿತು.
ಯು.ಎ.ಇ. ಮತ್ತು ಭಾರತ ರಾಷ್ಟ್ರಗೀತೆ ಯ ನಂತರ ಡಾ ರಶ್ಮೀ ನರೇನ್ ಸರ್ವರನ್ನು ಸ್ವಾಗತಿಸಿದರು. ಸ್ವಾಗತ ನೃತ ಪ್ರತೀಕ್ಷಾ ನಡೆಸಿಕೊಟ್ಟರು.
ಗೌರವಾನ್ವಿತ ದೊರೆ ಶೇಖ್ ಸಲೆಮ್ ಬಾಲರಕ್ಕಡ್ ಅಲ್ ಅಮೇರಿ ರವರಿಂದ ಕಾರ್ಯಕ್ರಮ ಉದ್ಘಾಟನೆ
ಅಲ್ ಐನ್ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಪ್ರಥಮ ಬಾರಿಗೆ ಮುಖ್ಯ ಅತಿಥಿಯಗಿ ಆಗಮಿಸಿದ ಯು.ಎ.ಇ. ಫೆಡರಲ್ ಪಾರ್ಲಿಮೆಂಟ್ ಸದಸ್ಯರಾದ ಗೌರವಾನ್ವಿತ ದೊರೆ ಶೇಖ್ ಸಲೆಮ್ ಬಾಲರಕ್ಕಡ್ ಅಲ್ ಅಮೇರಿ ರವರು ಹಾಗೂ ಗೌರವ ಅತಿಥಿಯಾಗಿ ಆಗಮಿಸಿದ ಎನ್. ಎಂ.ಸಿ. ಟ್ರೇಡಿಂಗ್ ಸಿ.ಇ.ಒ. ಶ್ರೀ ನಿರ್ಮನ್ ಶೆಟ್ಟಿ ರವರ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ “ಸೌಹಾರ್ದತೆಯ ಸಂಭ್ರಮ” 2019 ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಅತಿಥಿಗಳಾಗಿ ಎ. ಜೆ. ಗ್ರೂಪ್ ಸ್ಕೂಲ್ ಚೇರ್ಮನ್ ಶ್ರೀ ಅರ್ಶದ್ ಶರೀಫ್, ಎನ್. ಎಂ.ಸಿ. ಸ್ಪೆಶಾಲಿಟಿ ಹಾಸ್ಪಿಟಲ್ ಜೆನರಲ್ ಮ್ಯಾನೇಜರ್ ಶ್ರೀ ಮೋಹಿತ್ ಚತ್ರುವೇದಿ ಹಾಗೂ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈಯವರು ಹಾಗೂ ಅಲ್ ಐನ್ ಕನ್ನಡ ಸಂಘದ ಮುಖ್ಯ ಸಂಘಟಕರು ಶ್ರೀ ರೋನಾಲ್ಡ್ ಎಡ್ವಿನ್ ಲೋಬೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಗೌರವಾನ್ವಿತ ದೊರೆ ಶೇಖ್ ಸಲೆಮ್ ಬಾಲರಕ್ಕಡ್ ಅಲ್ ಅಮೇರಿ ಹಾಗೂ ಗೌರವ ಅತಿಥಿ ಶ್ರೀ ನಿರ್ಮನ್ ಶೆಟ್ಟಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಭಾಷೆಯ ಸೇವೆಗಾಗಿ “ವರ್ಷದ ಕನ್ನಡಿಗ ಪ್ರಶಸ್ತಿ” ಯನ್ನು ಶ್ರೀ ಬ್ರಹ್ಮಾವರ ಶೈಕ್ ಮನ್ಸೂರ್ ಹಾಗೂ ಶ್ರೀ ಮಹೇಶ್ ಗುಂಜಿ ಸುವರ್ಣ ರವರಿಗೆ ನೀಡಿ ಗೌರವಿಸಲಾಯಿತು.
“ಅತ್ಯುತ್ತಮ ಸೇವಾ ಸಾಧನೆ” ಪ್ರಶಸ್ತಿಯನ್ನು ಶ್ರೀ ಬಿ. ಕೆ. ಗಣೇಶ್ ರೈ, ಶ್ರೀ ಕೆ. ಬಿ. ರಮೇಶ್ ಕೊಡಗು ಮತ್ತು ಡಾ. ಬಿ. ಎನ್. ಕುಮಾರ್ ರವರಿಗೆ ಪ್ರಧಾನಿಸಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ – ವಿಘ್ನೇಶ್ ವಿಮಲ್ ಕುಮಾರ್, ಫ್ರೆಂಜಿಯಾ ಜೆಸ್ಸಿಕಾ ಡಿ’ಸೋಜಾ ಹಾಗೂ ಶ್ರೀಮತಿ ಶಾಲಿನಿ ಡಿ’ಸೋಜಾ ರವರಿಗೆ ನೀಡಿ ಗೌರವಿಸಲಾಯಿತು.
ಶ್ರೀಮತಿ ಕಾಮಿನಿ ತಂಡದವರಿಂದ ಸೌಹಾರ್ದತೆ ಗೀತೆ, ಶ್ರೀಮತಿ ಉಷಾ ಹರ್ಷ ರವರಿಂದ ವಾರ್ಷಿಕ ವರದಿ, ನೃತ್ಯ ಕಾರ್ಯಕ್ರಮದಲ್ಲಿ ರೋಜ್ಲಿನ್ ನೃತ್ಯ, ಎನ್. ಎಂ. ಸಿ. ಮಕ್ಕಳ ತಂಡ್, ಶರತ್ ಮತ್ತು ಆರ್ಯ ದೀಪಕ್, ನೀಲ ಗಗಂಥ್ ಶಾನೆಲ್ ಮತ್ತು ನಿಸಾಲ್, ಹಾಗೂ ಕೊಂಕಣಿ ಬಳಗದ ಸುಶ್ರಾವ್ಯ ಗಾಯನ ಮತ್ತು ಬೈಲಾ ನೃತ್ಯ ಗೀತೆ ಗಮನ ಸೆಳೆಯಿತು.
ರೆಬೆಲ್ ಸ್ಟಾರ್ ಅಂಬರೀಶ್ ನೆನಪಿನ ಅಂಗಳದಲ್ಲಿ ವಿಶೇಷ ಕಾರ್ಯಕ್ರಮ ಅಲ್ ಐನ್ ಕನ್ನಡ ಸಂಘದ ಪೂರ್ವ ಅಧ್ಯಕ್ಷರುಗಳು ಹಾಗೂ ಅವರ ಶ್ರೀಮತಿಯವರ ತಂಡದವರಿಂದ ಅಂಬರೀಶ್ ನುಡಿನಮನ ನೃತ್ಯರೂಪಕ ಅಕರ್ಷಕವಾಗಿತ್ತು.
ಶ್ರೀಮತಿ ಸವಿತಾ ನಾಯಕ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಎಲ್ಲಾ ಪ್ರಾಯೋಜಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಅಲ್ ಐನ್ ಕನ್ನಡ ಸಂಘದ ಯಶಸ್ವಿ ಹೆಜ್ಜೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಸದಸ್ಯರುಗಳಾದ ಶ್ರೀಮತಿಯರುಗಳಾದ ಶಾಲಿನಿ ಡಿ’ಸೋಜಾ, ಉಷಾ ಹರ್ಷಾ, ಡಿಂಪಲ್ ಆಳ್ವ, ಡಾ. ರಶ್ಮಿ ನರೇನ್ ಮತ್ತು ಶ್ರೀಯುತರುಗಳಾದ ಆದರ್ಶ್ ಲೂವಿಸ್, ಸೈಮನ್ ನವೀನ್ ಫೆರ್ನಾಂಡಿಸ್, ಸುದರ್ಶನ್ ಕೆ.ಎಸ್. ಡೆರಿಕ್ ಜೋಸೆಪ್ಫ್, ರೋನಾಲ್ಡ್ ಪಿರೇರಾ, ಡಾ ಹರ್ಷ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ ಐನ್ ಕನ್ನಡ ಸಂಘದ 2019 – 2020 ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರಿಗೆ ಜವಬ್ಧಾರಿಯನ್ನು ಹಸ್ತಾಂತರಿಸಲಾಯಿತು.
ಶ್ರೀಮತಿ ಕಾಮಿನಿಯವರು ಸರ್ವರಿಗೂ ವಂದನೆಗಳನ್ನು ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.