ಕರಾವಳಿ

ಇಂದು ಏಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ :ಮಂಗಳೂರು ಬಿಷಪ್‌‌ರಿಂದ ಈಸ್ಟರ್ ಹಬ್ಬದ ಸಂದೇಶ

Pinterest LinkedIn Tumblr

ಮಂಗಳೂರು, ಎಪ್ರಿಲ್. 19: ದೇಶಾದ್ಯಂತ (ಜಗತ್ತಿನಾದ್ಯಂತ) ಇಂದು ಶುಭಾ ಶುಕ್ರವಾರ (ಈಸ್ಟರ್ ಹಬ್ಬ). ಏಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನದ ಸ್ಮರಣಾರ್ಥ ಕ್ರೈಸ್ತರು ಶುಕ್ರವಾರ ‘ಶುಭ ಶುಕ್ರವಾರ’ ಆಚರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಜರುಗಿತು.

ಏಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಿಸಿ ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಏಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಸ್ಮರಿಸಿದರು. ಜತೆಗೆ ಈ ದಿನವನ್ನು ಧ್ಯಾನ ಮತ್ತು ಉಪವಾಸದ ಮೂಲಕ ಕಳೆದರು. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರೊಜಾರಿಯೊ ಕೆಥೆಡ್ರಲ್‌ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ರೀತಿ ಮತ್ತು ಮೃತ ಶರೀರವನ್ನು ಶಿಲುಬೆಯಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು. ಬಳಿಕ ಮೆರವಣಿಗೆ ನೆರವೇರಿತು. ಧರ್ಮಪ್ರಾಂತದ ಪ್ರಧಾನ ಗುರು ಮೊ.ಮ್ಯಾಕ್ಸಿಂ ಎಲ್. ನೊರೋನ್ಹಾ ನೇತೃತ್ವ ವಹಿಸಿದ್ದರು. ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಸಹಕರಿಸಿದರು. ಸಹಾಯಕ ಗುರು ಫಾ.ಫ್ಲೇವಿಯನ್ ಲೋಬೊ ಪ್ರವಚನ ನೀಡಿದರು.

ಮಂಗಳೂರಿನ ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ಮಧ್ಯಾಹ್ನ ನಡೆದ ಶಿಲುಬೆಯ ಹಾದಿ ಮತ್ತು ಸಂಜೆ ನಡೆದ ಪ್ರಾರ್ಥನಾ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದ್ದರು.

ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಮ್ಯಾಕ್ಸಿಂ ಎಲ್. ನೊರೋನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ವಿಕ್ಟರ್ ವಿಜಯ್ ಲೋಬೊ ಮತ್ತಿತರ ಗುರುಗಳು ಉಪಸ್ಥಿತರಿದ್ದರು.

ಮಂಗಳೂರು ಧರ್ಮಪ್ರಾಂತ್ಯದಧರ್ಮಾದ್ಯಕ್ಷರಾದ‌ ಅತೀ ವಂದನೀಯಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರಿಂದ ಈಸ್ಟರ್ ಹಬ್ಬದ ಸಂದೇಶ

ಯೇಸುಕ್ರಿಸ್ತರುದೇವ ಪುತ್ರರು; ಧರೆಗಿಳಿದು ಬಂದು, ಮನುಷ್ಯನಾಗಿ ಜನಿಸಿದರು. ಅವರು ನಮ್ಮಂತೆಯೇ‌ಇದ್ದುಕೊಂಡು, ಎಲ್ಲಾ ವಿಷಯಗಳಲ್ಲೂ ಶೋಧನೆ, ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ನಾವು ಸತ್‌ಜೀವ ಪಡೆಯಲು, ದೇವರುತಮ್ಮ ಏಕೈಕ ಪುತ್ರನನ್ನು ನಮಗಾಗಿ ದಾರೆಯೆರೆದುಕೊಟ್ಟಿದ್ದಾರೆ. ಸತ್ಯನೀತಿಯ ಮಾರ್ಗದಲ್ಲಿ ನಡೆದವರಿಗೆ ಕಷ್ಟ ಮತ್ತು ಕಿರುಕುಳ ಕಟ್ಟಿಟ್ಟ ಬುತ್ತಿ. ಕತ್ತಲಿನಲ್ಲಿ ನಡೆಯಲು‌ಇಚ್ಚಿಸುವಜನರಿಗೆ ಬೆಳಕಿನಲ್ಲಿ ನಡೆಯುವವರ ಬಗ್ಗೆ ಅಸೂಹೆ ಹಾಗೂ ದ್ವೇಷ‌ ಉಕ್ಕಿ ಬರುತ್ತದೆ. ಅಂತಹದ್ವೇಷಕ್ಕೆಗುರಿಯಾಗಿಯೇಸುಸ್ವಾಮಿಯವರು ಶಿಲುಬೆಯ ಮೇಲಿನ ಘೋರ ಮರಣಕ್ಕೆ ಬಲಿಯಾದರು.

ಆದರೆದೇವರು‌ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ – ಅವರನ್ನು ಬಂದಿಸಿಡುವುದು ಮೃತ್ಯುವಿಗೆ‌ಅಸಾಧ್ಯವಾಗಿತ್ತು. ಭಾನುವಾರ ಮುಂಜಾನೆ‌ಅವರ ಪಾರ್ಥಿವ ಶರೀರವಿಟ್ಟ ಸಮಾದಿಯಕಲ್ಲುತೆಗೆಯಲ್ಪಟ್ಟಿದ್ದುದೇವದೂತರು ನಡೆದಘಟನೆಯನ್ನು ಮಾಗ್ದಲದ ಮರಿಯಳಿಗೆ ವಿವರಿಸಿ ಹೇಳಿದರು. ಅಷ್ಟರಲ್ಲಿಯೇಸುವೇ ಅವಳಿಗೆ ತಮ್ಮದರ್ಶನ ನೀಡಿ, ತಾನುಜೀವಂತನಾಗಿದ್ದೇನೆ‌ ಎಂದು ತೋರಿಸಿದರು. ಹನ್ನೊಂದು ಮಂದಿ ಶಿಷ್ಯರಿಗೂ ತಮ್ಮದರ್ಶನವನ್ನು ನೀಡಿದಯೇಸು, ಮೊಳೆಗಳನ್ನು ಜಡಿದತನ್ನ ಕೈಗಳನ್ನೂ, ಈಟಿಯಿಂದ ತಿವಿಯಲ್ಪಟ್ಟತನ್ನ ಪಕ್ಕೆಯನ್ನೂ ತೋರಿಸಿದರು; ಮಾತ್ರವಲ್ಲದೆ‌ಅವರು ಶಿಷ್ಯರ ಮೇಲೆ ಪವಿತ್ರಾತ್ಮರ ವರವನ್ನೂಕೊಟ್ಟು ಹೀಗೆಂದರು: “ಪವಿತ್ರಾತ್ಮರನ್ನು ಸ್ವೀಕರಿಸಿ, ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ‌ಅವನ್ನುಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆಕ್ಷಮಿಸದೆ ಉಳಿಸಲಾಗುವುದು” ಎಂದು ನುಡಿದರು.

ಯೇಸುಕ್ರಿಸ್ತರು ಲೋಕದ ಪಾಪಗಳನ್ನು ಪರಿಹರಿಸುವದೇವರಕುರಿಮರಿ,ಅವರ ಮೇಲೆ ಯಾರು ವಿಶ್ವಾಸವಿಡುತ್ತಾರೋ‌ ಅವರಿಗೂ ಪುನರುತ್ಥಾನದ ವರದೊರಕುವುದು‌ಎಂದು‌ಆಶ್ವಾಸನೆಯನ್ನು ನೀಡಿದ್ದಾರೆ.

ಯೇಸುವಿನಲ್ಲಿ ವಿಶ್ವಾಸ ವಿಟ್ಟಲ್ಲಿ ನಾವು ನಿತ್ಯಕಾಲವು ದೇವರೊಡನೆಜೀವಿಸುವೆವು. ಈ ನಮ್ಮ ಶರೀರವು ಹೊಸತನವನ್ನು ಹೊಂದಿ, ನಾವು ಸತ್ತರೂ, ಪುನಃ ಎದ್ದು ಬಂದು ನಿರಂತರವಾಗಿದೇವಸ್ವರೂಪಿಯಾಗಿದೇವರೊಡನೆಬಾಳುವೆವು. ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಿತ್ಯಜೀವವನ್ನು ಪಡೆಯಲು ಯೋಗ್ಯರಾಗುವೆವು. ಅನ್ಯಾಯವನ್ನು ಸಹಿಸಿ,ಬಳಲಿ ಬೆಂಡಾದವರಿಗೆ ಪುನರುತ್ಥಾನದಲ್ಲಿ ನ್ಯಾಯ ದೊರಕುವುದು. ಪುನರುತ್ಥಾನವಿಲ್ಲದಿದ್ದಲ್ಲಿ ನಾವು ಸಹಿಸಿದ ಕಷ್ಟಗಳಿಗೆ, ನೀತಿಗಾಗಿ ಪಟ್ಟ ಬವಣೆಗಳಿಗೆ ಏನೂ ಪ್ರತಿಫಲವಿಲ್ಲದಂತಾಗುತ್ತದೆ.

ದೇವರು ನಮಗೆ ನೀಡಿದ ಪುನರುಜ್ಜೀವನದ‌ಆಶ್ವಾಸನೆಯು ಹೇಗೆ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆಯೋ, ಅದೇ ರೀತಿ ವಸಂತ‌ ಋತುವಿನಲ್ಲಿ‌ ಉದುರುವ ಪ್ರತಿಯೊಂದು‌ ಎಲೆಯಲ್ಲೂ ಸಾಕ್ಷತ್ಕರಿಸಲ್ಪಟ್ಟಂತೆತೊರುತ್ತದೆ. ಏಕೆಂದರೆ ಈ ಋತುವಿನಲ್ಲಿ‌ಉದುರುವ ಪ್ರತಿಯೊಂದು‌ ಎಲೆಯೂ ಮುಂದೆ ಬರಲಿರುವಚಿಗುರಿನ ಸೂಚನೆಯಾಗಿದೆ. ವಸಂತ‌ಋತುವಿನ ಕಾಲದಲ್ಲಿ ಬರುವ ಪುನರುಜ್ಜೀವನದ ದ್ಯೋತಕವಾದ‌ಈಸ್ಟರ್ ಹಬ್ಬವು, ನಮ್ಮ ಪ್ರತಿಯೊಬ್ಬರ ಪುನರುಜ್ಜೀವನಕ್ಕೂ ನಾಂದಿಯಾಗಿದೆ.

ಬಲಾಡ್ಯವಾದ ಮೃತ್ಯುವಿಗಿಂತಜೀವನವೇ ಬಲಿಷ್ಟವಾದುದು.
ಘೋರವಾದಕತ್ತಲೆಗಿಂತ ಬೆಳಕೇ ಶ್ರೇಷ್ಟವಾದುದು.
ಆತ್ಮಸಾಕ್ಷಿಯನ್ನು ವಂಚಿಸುವತಪ್ಪಿಗಿಂತ,
ಮನಸ್ಸನ್ನು ನಿರಾಳಗೊಳಿಸುವ ನೈಜತೆಯ ಸತ್ಯವು ಮಿಗಿಲಾದುದು
ಎಂಬುದನ್ನುದೃಡಪಡಿಸಲುಯೇಸು ನಮಗೆ ನೀಡಿದ
ನಂಬುಗೆ ಮತ್ತು ಭರವಸೆಯ ವಿಜಯೋತ್ಸವವೇ‌ಈಸ್ಡರ್- ಪಾಸ್ಖ ಹಬ್ಬ.   ತಮಗೆಲ್ಲರಿಗೂ‌ಈಸ್ಟರ್ ಹಬ್ಬದ ಶುಭಾಷಯಗಳು.

ಅತೀ ವಂದನೀಯಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಧರ್ಮಾದ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ.

Comments are closed.