ರಾಷ್ಟ್ರೀಯ

ಕತ್ತೆಗಳ ಮೇಲೆ ಇವಿಎಂ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸಾಗಿಸಿಸಾಗಿಸಿದ ಚುನಾವಣಾ ಅಧಿಕಾರಿಗಳು!

Pinterest LinkedIn Tumblr

ಚೆನ್ನೈ: ಚುನಾವಣಾ ಅಧಿಕಾರಿಗಳು ಕತ್ತೆಗಳ ಮೇಲೆ ಇವಿಎಂ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸಾಗಿಸಿರುವ ಪ್ರಸಂಗ ನಿನ್ನೆ ತಮಿಳುನಾಡಿನಲ್ಲಿ ನಡೆದ್ದು, ಭಾರೀ ಸುದ್ದಿಯಾಗಿದೆ.

ತಮಿಳುನಾಡಿನ ಧರ್ಮಪುರಿ, ದಿಂಡಿಗುಲ್, ಈರೋಡ್, ನಮಕ್ಕಲ್ ಹಾಗೂ ಥೇಣಿ ಭಾಗಗಳಲ್ಲಿ ಸರಿಯಾದ ರಸ್ತೆಗಳ ವ್ಯವಸ್ಥೆಯಿಲ್ಲ. ಹೀಗಾಗಿ ಚುನಾವಣಾ ಅಧಿಕಾರಿಗಳು ಸುಮಾರು 11 ಕಿ.ಮೀ. ವರೆಗೆ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಮತದಾನ ಸಾಮಗ್ರಿಗಳನ್ನು ಕತ್ತೆಗಳ ಮೇಲೆ ಸಾಗಿಸಬೇಕಾದ ವಿಪರ್ಯಾಸ ಅಧಿಕಾರಿಗಳಿಗೆ ಎದುರಾಯಿತು.

ಗುಡ್ಡಗಾಡು ಪ್ರದೇಶದಲ್ಲಿ ಮತಗಟ್ಟೆಗಳಿದ್ದು, ಅಲ್ಲಿ ಸುಮಾರು 300 ರಿಂದ 1,000 ಮತದಾರರು ಮಾತ್ರ ಇರುತ್ತಾರೆ. ಅಂತಹ ಪ್ರದೇಶಗಳಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಅಧಿಕಾರಿಗಳು ಕಾಲ್ನಡಿಗೆಯ ಮೂಲಕವೇ ಮತಗಟ್ಟೆ ತಲುಪಿ, ಮತದಾನ ಪ್ರಕ್ರಿಯೆ ಮುಗಿಸಿಕೊಂಡು ಮರಳಿದ್ದಾರೆ.

ಮತಗಟ್ಟೆಗೆ ಹೋಗುವಾಗ ಹಾಗೂ ಅಲ್ಲಿಂದ ಮರಳುವಾಗ ಇವಿಎಂ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸಾಗಿಸಲು ಅಧಿಕಾರಿಗಳು ಕತ್ತೆಗಳನ್ನು ಬಳಸಿಕೊಂಡಿದ್ದಾರೆ. ಕೆಲವು ಸಾಮಗ್ರಿಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಕತ್ತೆಗಳ ಮೇಲೆ ಹಾಕಿದ್ದು, ಸ್ವಲ್ಪ ಸಾಮಗ್ರಿಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಿದ್ದಾರೆ.

ಈ ಮೂಲಕ ಕೊಡೈಕನಲ್ ಪರ್ವತ ಶ್ರೇಣಿಯ ದಿಂಡಿಗುಲ್, ಈರೋಡ್, ನಾಮಕ್ಕಲ್ ಗಳಲ್ಲಿನ ಮತಗಟ್ಟೆಗೆ ತಲುಪಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ದಟ್ಟವಾದ ಕಾಡುಗಳಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯು ಚುನಾವಣಾ ಅಧಿಕಾರಿಗಳಿಗೆ ಭದ್ರತೆ ಒದಗಿಸಿತ್ತು.

Comments are closed.