ಕುಂದಾಪುರ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಪೀಡನೆ ನೀಡಿದ ಆರೋಪದಡಿಯಲ್ಲಿ ಗ್ರಾಮಪಂಚಾಯತ್ ಸದಸ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೆರ್ಗಾಲ್ ಗ್ರಾ.ಪಂ ಸದಸ್ಯ ರಮೇಶ್ ಗಾಣಿಗ ಮೊಗೇರಿ (38) ಬಂಧಿತ ಆರೋಪಿ.
14 ವರ್ಷ ಪ್ರಾಯದ ಬಾಲಕನೋರ್ವನನ್ನು ಮಂಗಳವಾರದಂದು ಕೆರ್ಗಾಲ್ ವ್ಯಾಪ್ತಿಯಲ್ಲಿನ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಆತನ ಮೇಲೆ ಲೈಂಗಿಕ ಪೀಡನೆಗೆ ಮುಂದಾಗಿದ್ದು ಆತ ಕೂಗಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಮನೆಗೆ ತೆರಳಿ ನಡೆದ ವಿಚಾರ ತಿಳಿಸಿದ್ದು ಸಂತ್ರಸ್ತ ಬಾಲಕನ ಕುಟುಂಬಿಕರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸಿದ್ದಾರೆ. ತಡರಾತ್ರಿ ಕುಂದಾಪುರದ ನ್ಯಾಯಾಧೀಶರ ಮನೆಗೆ ಹಾಜರುಪಡಿಸುವ ಸಾಧ್ಯತೆಗಳಿದೆ.