ಕರಾವಳಿ

ಕಾಂಗ್ರೆಸ್ ಪ್ರಣಾಳಿಕೆ ದೇಶದ ಸುರಕ್ಷತೆಗೆ ಅಪಾಯ : ಮಂಗಳೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ

Pinterest LinkedIn Tumblr

ಮಂಗಳೂರು : ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದ ಚುನಾವಣೆ ಪ್ರಣಾಳಿಕೆ ದೇಶದ ಸುರಕ್ಷತೆಯ ದೃಷ್ಠಿಯಿಂದ ಅತ್ಯಂತ ಅಪಾಯವಾದುದು ಎಂದು ಟೀಮ್ ಮೋದಿ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೇಶದ್ರೋಹದ ಕೆಲಸ ಮಾಡುವವರನ್ನು ಶಿಕ್ಷಿಸಲು ಇರುವ ಸೆಡಿಶನಲ್ ಕಾನೂನನ್ನು ತೆಗೆದು ಹಾಕುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದು, ಇದರಿಂದ ದೇಶದ್ರೋಹ ಕೃತ್ಯದಲ್ಲಿ ತೊಡಗಿಸಿಕೊಂಡವರು ಸುಲಭವಾಗಿ ಬಚಾವಾಗಲು ಹಾದಿ ಸುಗಮವಾಗಲಿದೆ. ಇದು ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಇಷ್ಟೇ ಅಲ್ಲದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸೈನಿಕರ ರಕ್ಷಣೆಗಿರುವ ಆಪ್‍ಸ್ಪಾ ಕಾನೂನನ್ನೂ ಅವಶ್ಯವಿದ್ದಲ್ಲಿ ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ದೇಶ, ಸೈನಿಕರಿಗೆ ಶಕ್ತಿ ತುಂಬುವ ಬದಲು ದೇಶವನ್ನು ಅಸುರಕ್ಷತೆಯಡೆಗೆ ತೆಗೆದುಕೊಂಡುವ ಹೋಗುವ ಕೆಲಸವನ್ನು ಕಾಂಗ್ರೆಸ್ ಮಾಡಲು ಮುಂದಾಗಿದಂತಿದೆ ಎಂದರು.

ಸಂವಿಧಾನದ 35ನೇ ಪರಿಚ್ಛೇದ ಹಾಗೂ 370ನೇ ಪರಿಚ್ಛೇದವನ್ನು ತೆಗೆದು ಹಾಕುವುದಾಗಿ ನರೇಂದ್ರ ಮೋದಿ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಇದು ಸಮಗ್ರ ದೇಶ ಹೆಮ್ಮೆ ಪಡುವ ವಿಚಾರವಾಗಿದೆ. ನಮ್ಮ ದೇಶದ ಹಿತಕ್ಕಾಗಿ, ಬಡವರ ಕಲ್ಯಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅನಿವಾರ್ಯ ಎಂದು ಸೂಲಿಬೆಲೆ ಹೇಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಪ್ರತಿ ಲೋಕಸಭಾ ಕ್ಷೇತ್ರದ ಸ್ಥಳೀಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಟೀಮ್ ಮೋದಿ ತಂಡ ರಾಜ್ಯಾದ್ಯಂತ ರಥಯಾತ್ರೆ, 100ರಿಂದ 120 ಚುನಾವಣಾ ರ್ಯಾಲಿ ನಡೆದಿದೆ. ಇದರಲ್ಲಿ ಮೋದಿಯವರ ವ್ಯಕ್ತಿತ್ವ, ಆಡಳಿತ ಹಾಗೂ ದೇಶಪ್ರೇಮದ ಬಗ್ಗೆ ಸಮಗ್ರ ಪ್ರಚಾರ ನಡೆಸುತ್ತಿದೆ. ರಾಜ್ಯದಲ್ಲಿ 20ಕ್ಕೂ ಅಕ ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಂದ ನಾನಾ ಹೇಳಿಕೆಗಳನ್ನು ಕಾಂಗ್ರೆಸ್ ಪಕ್ಷವೇ ಹೇಳಿಸುತ್ತಿದೆಯೋ ಗೊತ್ತಿಲ್ಲ. ನರೇಂದ್ರ ಮೋದಿಯಿಂದ ಶಾಂತಿ ಮಾತುಕತೆಗೆ ಭಂಗ ಉಂಟಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ, ಇದೀಗ ನರೇಂದ್ರ ಮೋದಿ ಪ್ರಧಾನಿಯಾದರೆ ಶಾಂತಿ ಮಾತುಕತೆಗೆ ಪೂರಕವಾಗಲಿದೆ ಎಂದು ಹೇಳುತ್ತಿದ್ದಾರೆ ಎಂದರು.

ಸುಳ್ಯ ಭರವಸೆ :  ಕಾಂಗ್ರೆಸ್ ಸರಕಾರ ಬಂದರೆ ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ಇದೊಂದು ಸುಳ್ಳು ಭರವಸೆ. ರಾಹುಲ್ ಗಾಂ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ನಾಯಕರಿಗೆ ಈ ಹಣವನ್ನು ಹೇಗೆ ನೀಡುತ್ತೀರಿ ಎಂದು ಕೇಳಿದರೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಸೂಲಿಬೆಲೆ ಹೇಳಿದರು.

Comments are closed.