ಕರಾವಳಿ

ಬರಡು ನಾಡಿನಿಂದ ಬಂದ ನಾಡಗೌಡರಿಗೆ ಮೀನುಗಾರರ ಬಗ್ಗೆ ಏನು ಗೊತ್ತು?- ಶೋಭಾ ಪ್ರಶ್ನೆ

Pinterest LinkedIn Tumblr

ಉಡುಪಿ: ಕಾಣೆಯಾದ ಮೀನುಗಾರರು ಅನಂತ ಕುಮಾರ್ ಹೆಗಡೆ ಮತದಾರರು ಎಂಬ ಮೀನುಗಾರಿಕ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆಗೆ ಕುಂದಾಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಸಾವು-ನೋವು, ಅನಾಹುತದಲ್ಲಿ ರಾಜಕೀಯ ಮಾಡುವುದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಮಾತ್ರವಲ್ಲದೇ ಇದು ಕೀಳುಮಟ್ಟದ ರಾಜಕಾರಣ. ಕಾಣೆಯಾದ ಮೀನುಗಾರರು ನಮ್ಮವರು, ಕೇಂದ್ರ ಸರಕಾರ ಅವರ ಪತ್ತೆಗೆ ಕ್ರಮಕೈಗೊಂಡಿದೆ. ರಾಜ್ಯ ಸರಕಾರ ಕೇಮ್ದ್ರಕ್ಕೆ ಮನವಿ ಸಲ್ಲಿಸುವ ಕಾರ್ಯವನ್ನೂ ಸರಿಯಾಗಿ ಮಾಡಿಲ್ಲ.

ಸಚಿವ ನಾಡಗೌಡರಿಗೆ ಮೀನುಗಾರರ ಬಗ್ಗೆ ಗೊತ್ತೇ ಇಲ್ಲ. ಸಿಂಧನೂರು ಎನ್ನುವ ಬರಡು ನಾಡಿನಿಂದ ಬಂದ ಇವರಿಗೆ ಮೀನುಗಾರಿಕೆ ಬಗ್ಗೆ ತಿಳಿಯುದಾದರೂ ಏನು ಎಂದು ಪ್ರಶ್ನಿಸಿದ ಅವರು ಈ ಸರಕಾರ ಅವರನ್ನು ಮೀನುಗಾರಿಕೆ ಸಚಿವರನ್ನಾಗಿ ಮಾಡಿದ್ದ್ಯಾಕೆ ಅನ್ನೋದೆ ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದ್ರು.

(ವರದಿ- ಯೋಗೀಶ್ ಕುಂಭಾಸಿ)

Comments are closed.