ಕರಾವಳಿ

ಡಿಸಿಪಿ ಉಮಾ ಪ್ರಶಾಂತ್ ಎಸಿಬಿ ಎಸ್ಪಿ – ಲಕ್ಷ್ಮೀ ಗಣೇಶ್ ಮಂಗಳೂರಿನ ನೂತನ ಡಿಸಿಪಿ

Pinterest LinkedIn Tumblr

ಎಸಿಬಿ ಎಸ್‌ಪಿ ಉಮಾ ಪ್ರಶಾಂತ್

ಮಂಗಳೂರು, ಎಪ್ರಿಲ್. 11: ಮಂಗಳೂರು ನಗರದ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರು ಎಸಿಬಿ ಎಸ್‌ಪಿ ಆಗಿ ವರ್ಗಾವಣೆಗೊಂಡಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ಚುನಾವಣ ಸಂದರ್ಭದಲ್ಲಿ ನಡೆಯುವ ವರ್ಗಾವಣೆ ಪ್ರಕ್ರಿಯೆಯಂತೆ ಮಂಗಳೂರು ನಗರದ ಡಿಸಿಪಿ ಉಮಾ ಪ್ರಶಾಂತ್ ಅವರನ್ನು ಪಶ್ಜಿಮ ವಲಯದ (ಮಂಗಳೂರು) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಎಸ್‌ಪಿ ಆಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ ಬೆಂಗಳೂರಿನಲ್ಲಿ ಲೋಕಾಯುಕ್ತ ಎಸ್‌ಪಿ ಆಗಿದ್ದ ಲಕ್ಷ್ಮೀ ಗಣೇಶ್ ಅವರನ್ನು ಮಂಗಳೂರಿನ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಆಗಿ ನೇಮಕ ಮಾಡಲಾಗಿದ್ದು, ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

Comments are closed.