ಕರಾವಳಿ

ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಚಿತ್ರನಟಿ ತಾರಾ

Pinterest LinkedIn Tumblr

ಮಂಗಳೂರು, ಎಪ್ರಿಲ್.04 : ಲೋಕಸಭಾ ಚುನಾವಣಾ ಪ್ರಚಾರದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯ ನಾಯಕಿ ತಾರಾ ಪ್ರಚಾರಕರೂ ಆಗಿರುವ ಶ್ರೀಮತಿ ತಾರಾ ಅವರು ಇಂದು ಮಂಗಳೂರಿಗೆ ಆಗಮಿಸಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಪರ ಮತಯಾಚನೆ ಮಾಡಿದರು.

ಬಳಿಕ ತಾರಾ ಅವರು, ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪರದಲ್ಲಿ ತೊಡಗಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಪಕ್ಷದ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ,ರಾಮಚಂದ್ರ ಬೈಕಾಂಪಾಡಿ, ರೂಪಾ ಡಿ,ಬಂಗೇರಾ, ಶ್ರೀಮತಿ ಆಶಾಜಗದೀಶ್ ಹಾಗೂ ಮಹಿಳಾ ಘಟಕದ ಪ್ರಮುಖರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಜೆ ಕೃಷ್ಣಾಪುರದಲ್ಲಿ ಬೃಹತ್ ಸಭೆಯಲ್ಲಿ ತಾರಾ ಭಾಷಣ:

ಇಂದು ಸಂಜೆ 6.30ಕ್ಕೆ, ಸುರತ್ಕಲ್ ಸಮೀಪದ ಕೃಷ್ಣಾಪುರದ ಕೇಂದ್ರ ಮೈದಾನದಲ್ಲಿ (ಯುವಕ ಮಂಡಲದ ಮುಂಭಾಗ) ಲೋಕಸಭಾ ಚುನಾವಣಾ ಪ್ರಚಾರದ ಪ್ರಯುಕ್ತ ಬಿಜೆಪಿಯ ಮಹಿಳಾ ನಾಯಕಿ, ಚಲನಚಿತ್ರ ನಟಿ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ತಾರಾ ಅವರು ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿರುವರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Comments are closed.