ಕರಾವಳಿ

ನಂತೂರಿನ ಹೈಪೈ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ : ಇಬ್ಬರ ಬಂಧನ – ಮೂವರು ಮಹಿಳೆಯರ ರಕ್ಷಣೆ

Pinterest LinkedIn Tumblr

ಮಂಗಳೂರು :ನಂತೂರ್ ಸಮೀಪದ ಅಪಾರ್ಟ್‌ಮೆಂಟೊಂದರಲ್ಲಿ ನಡೆಯುತ್ತಿದ್ದ ಹೈಪೈ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಮೊಡಂಕಾಪು ನಿವಾಸಿ ಐವನ್ ಸಿರಿಲ್ ಪಿಂಟೊ@ ಪವನ್ ( 35) ಹಾಗೂ ಮಂಗಳೂರು ಯೆಯ್ಯಾಡಿಯ ಸತೀಶ್ ಆಚಾರ್ಯ (31) ಎಂದು ಗುರುತಿಸಲಾಗಿದೆ.

ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರಿಗೆ ನಂತೂರು ಜಂಕ್ಷನ್ ಬಳಿ ಇರುವ ಸ್ಟಾರ್ ಲಿಜೆಸಿ ಅಪಾರ್ಟ್ ಮೆಂಟ್ ನ ಜಿ-1ರಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಇಟ್ಟುಕೊಂಡು ಲೊಕ್ಯಾಂಟೋ ವೆಬ್ ಸೈಟ್ ಮುಖಾಂತರ ಮಹಿಳೆಯರ ಪೋಟೋ ವನ್ನು ಅಫ್ಲೋಡ್ ಮಾಡಿ ಗಿರಾಕಿಗಳನ್ನು ಆಹ್ವಾನಿಸಿ ಹೈಪೈ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸದ್ರಿ ಅಪಾರ್ಟ್ ಮೆಂಟ್ ಗೆ ಧಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತಿದ್ದ ಇಬ್ಬರು ಪಿಂಪ್ ಗಳನ್ನು ಬಂಧಿಸಿ, ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ.

ಆರೋಪಿಗಳ ವಶದಲ್ಲಿದ್ದ 23,500 ರೂ ಮತ್ತು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ.ಕೆ., ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.