ಕರಾವಳಿ

ಮಣಿಪಾಲ ರೇಪ್&ಮರ್ಡರ್ ಕೇಸ್ ಆರೋಪಿ ಎಸ್ಕೇಪ್!

Pinterest LinkedIn Tumblr

ಉಡುಪಿ: ಮಣಿಪಾಲದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.9 ರಂದು ನಡೆದ ಅಪ್ರಾಪ್ತ ಯುವತಿಯ ಅತ್ಯಾಚಾರ‌ ಮತ್ತು ಕೊಲೆ ಪ್ರಕರಣದ ಆರೋಪಿ ಹನುಮಂತ ಬಸಪ್ಪ ಕಂಬಳಿ (39) ಹಿರಿಯಡಕದಲ್ಲಿರುವ ಸಬ್ ಜೈಲು ಬಳಿ ಹಾಡಿಯಲ್ಲಿ ಓಡಿ ಪರಾರಿಯಾಗಿದ್ದಾನೆ.

ಹಿರಿಯಡಕ ಕಾರಾಗೃಹ ಸಮೀಪದಲ್ಲಿ ಕಾಡಿನಲ್ಲಿ ತಪ್ಪಿಸಿಕೊಂಡಿದ್ದು ಹಳದಿ ಬಣ್ಣದ ಬನಿಯನ್ ಹಾಕಿದ್ದ. ಕೈಯಲ್ಲಿ ಪಿಂಕ್ ಬಣ್ಣದ ಲಕೊಟೆ ಇದ್ದು ಈತನ ಸುಳಿವು‌ ದೊರೆತಲ್ಲಿ  ಹತ್ತಿರದ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

ಶಿವಳ್ಳಿಯ ಮೂಡುಸಗ್ರಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪ ಈತನ ಮೇಲಿದ್ದು ಮಣಿಪಾಲ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದ್ದಾಗ 14 ದಿನ ನ್ಯಾಯಾಂಗ ಬಂಧನವೂ ವಿಧಿಸಿದ್ದರು.

Comments are closed.