ಕರಾವಳಿ

Anti Satellite (ASAT) ಮಿಸೈಲ್ ; ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಆಧುನಿಕ ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇವತ್ತು ನಮ್ಮ ದೇಶ ಪ್ರಪಂಚದ ನಾಲ್ಕನೇಯ ಅತೀ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣೀಕತೃರಾಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಭಿನಂದಿಸಿದ್ದಾರೆ.

ಶಾಸಕ ಡಿ ವೇದವ್ಯಾಸ ಕಾಮತ್

Anti Satellite (ASAT) ಮಿಸೈಲ್ ಮೂಲಕ ಮೂರು ನಿಮಿಷದಲ್ಲಿ ಶತ್ರುಗಳ ಮಿಸೈಲ್ ಹೊಡೆದುರುಳಿಸಲು ತಂತ್ರಜ್ಞಾನ ಸೃಷ್ಟಿಸಿದ ವಿಜ್ಞಾನಿಗಳ ಸಾಧನೆಯ ಹಿಂದೆ ಪ್ರೇರಣಾಶಕ್ತಿಯಾಗಿರುವ ಮೋದಿಯವರು ದೇಶವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ಕಟಿಬದ್ಧರಾಗಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

Comments are closed.