ಕರಾವಳಿ

ಕದ್ರಿ ಶ್ರೀ ಮಂಜುನಾಥೇಶ್ವರನ ಆಶೀರ್ವಾದ ಪಡೆದು ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ

Pinterest LinkedIn Tumblr

ಮಂಗಳೂರು, ಮಾರ್ಚ್.28 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಯವರು ಸೋಮವಾರ ಬೆಳಗ್ಗೆ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ತಮ್ಮ ಚುನಾವಣಾ ಪ್ರಚಾರ ಆರಂಭಿಸಿದರು.

ಇಂದು ಬೆಳಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಿಥುನ್ ರೈ ಅವರು ಕದ್ರಿ ಶ್ರೀ ಕ್ಷೇತ್ರದ ಪರಿಸರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಿಥುನ್ ರೈಯವರು, ಕಾಂಗ್ರೆಸ್ ಪಕ್ಷ ಯುವಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ, ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದೆ. ಉದ್ಯೋಗ ಸಮಸ್ಯೆ ದೇಶಾದ್ಯಂತ ಇರುವುದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಕನಸು ಕಂಡು ಓದಿದ ಮಕ್ಕಳ ಉಜ್ವಲ ಭವಿಷ್ಯ ಕೆಲಸ ಅರಸುವುದರಲ್ಲೇ ಕಮರಿ ಹೋಗದಂತೆ ಕೈಗಾರಿಕಾ ಪ್ರದೇಶ ಹಾಗೂ ವಿಶೇಷ ಆರ್ಥಿಕ ವಲಯದ ನಿರ್ಮಾಣ ಮಾಡುವುದು ನನ್ನ ಉದ್ಧೇಶವಾಗಿದೆ ಎಂದು ಹೇಳಿದರು.

ಮತಯಾಚನೆ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಕಾರ್ಪೋರೇಟರ್ ಅಶೋಕ್ ಡಿ.ಕೆ, ಪಕ್ಷದ ಪ್ರಮುಖರಾದ ಟಿ.ಕೆ.ಸುಧೀರ್, ಸುರೇಶ್ ಕದ್ರಿ, ವಿಶ್ವಾಸ್ ಕುಮಾರ್ ದಾಸ್, ಚಂದ್ರಕಲಾ, ಭಾರತಿ, ಗೋಪಾಲ್ ಶೆಟ್ಟಿ, ರಾಜೇಶ್ ಬೆಂಗರೆ, ಸಮರ್ಥ ಭಟ್, ಶಾಂತಳಾ ಗಟ್ಟಿ , ನಿಶಾಂತ್ ಶೆಟ್ಟಿ ಹಾಗೂ ಮತ್ತಿತರರು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಶ್ರೀ. ಮಿಥುನ್ ರೈ ಯವರ ಜೊಜೆಗಿದ್ದರು.

Comments are closed.